Notes For K A S




ಸ್ವತಂತ್ರ ಪೂರ್ವದಲ್ಲಿ ಧಾರ್ಮಿಕ 


                ಮತ್ತು


ಸಾಂಸ್ಕೃತಿಕ ಸಂಸ್ಥೆಯ ಉದಯಗಳು

ಬ್ರಹ್ಮ ಸಮಾಜ
ಇದು 1828ರಲ್ಲಿ ರಾಜಾರಾಂ ಮೋಹನ್ ರಾಯ್ ರವರಿಂದ ಸ್ಥಾಪಿಸಲ್ಪಟ್ಟಿತು ಮತ್ತು ಡೇವಿಡ್ ಹರೆಯವರ ಜೊತೆಗೂಡಿ ಹಿಂದು ಕಾಲೇಜನ್ನು ಸ್ಥಾಪಿಸಿದರು ಮತ್ತು ವೇದಾಂತ ಕಾಲೇಜನ್ನು ಸ್ಥಾಪಿಸಿದರು,  ಮತ್ತು ಇವರು ಮೀರತ್ ಉಲ್ ಅಕ್ಬರ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು
ಪ್ರಾರ್ಥನ ಸಮಾಜ ಕೇಸಬ್ ಚಂದ್ರ ಸೇನ್ ರವರಿಂದ ಪ್ರಾರಂಭವಾಯಿತು,  ಪ್ರಾರ್ಥನ ಸಭಾವು ಎಂ.ಜಿ. ರಾನಡೆಯವರಿಂದ ಪ್ರಾರಂಭವಾಯಿತು, ಆನಂದ್ ಮೋಹನ್ ಬೋಸ್ ರಿಂದ ಸಾಧಾರಣ ಬ್ರಹ್ಮಸಮಾಜ ಸ್ಥಾಪಿತವಾಯಿತು.
ಆರ್ಯ ಸಮಾಜ ಇದು 1875ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರಿಂದ ಪ್ರಾರಂಭವಾಯಿತು ಇದರ ಧ್ಯೇಯವಾಕ್ಯ ವೇದಗಳಿಗೆ ಹಿಂದಿರುಗಿ ಎಂದು ಮತ್ತು ಇವರು ಸಿದ್ದಿ ಆಂದೋಲನವನ್ನು ಪ್ರಾರಂಭಿಸಿ ಇದರ ಮೂಲಕ ಹಿಂದು ಧರ್ಮದಿಂದ ಬೇರೆಯಾದವರನ್ನು ಮತ್ತೆ ಹಿಂದು ಧರ್ಮಕ್ಕೆ ಸೇರಿಸಿಕೊಳ್ಳವುದಾಗಿತ್ತು.
ರಾಮಕೃಷ್ಣ ಆಶ್ರಮ ಇದು 1893ರಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಬಂದ ನಂತರ ವಿವೇಕಾನಂದರು 1897 ರಲ್ಲಿ ಪ್ರಾರಂಭಿಸಿದರು
ವೇದ ಸಮಾಜ ಇದು ದಕ್ಷಿಣಭಾರತದಲ್ಲಿ ಶ್ರೀಧರಲು ನಾಯ್ಡುರಿಂದ ಸ್ಥಾಪಿತವಾಯಿತು
ಧರ್ಮ ಸಭಾ ಇದು ರಾಧಾಕಾಂತ ದೇವರಿಂದ ಪ್ರಾರಂಭವಾಯಿತು
ರಾಷ್ಟ್ರೀಯ ಸಾಮಾಜಿಕ ಸಭೆ ಎಂ.ಜಿ. ರಾನಡೆಯವರಿಂದ ಪ್ರಾರಂಭವಾಯಿತು.
ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ 1915 ರಲ್ಲಿ ಗೋಪಾಲ ಕೃಷ್ಣ ಗೋಖಲೆಯವರಿಂದ ಪ್ರಾರಂಭವಾಯಿತು
ದೇವ ಸಮಾಜ ಶಿವ ನಾರಾಯಣ್ ಅಗ್ನಿಹೋರ್ತಿಯವರಿಂದ ಪ್ರಾರಂಭವಾಯಿತು
ಥಿಯಾಸಫಿಕಲ್ ಸೊಸೈಟಿ ಇದು 1875ರಲ್ಲಿ ಮೇಡಂ ಬ್ಲಾವಟ್ಸ್ಕಿಯವರಿಂದ ಪ್ರಾರಂಭವಾಯಿತು ಇದು ಭಾರತದಲ್ಲಿ ಆನಿಬೆಸೆಂಟ್ ರವರಿಂದ 1882ರಲ್ಲಿ ಪ್ರಾರಂಭವಾಯಿತು, ಅನಿಬೆಸೆಂಟ್ ರವರು ಸೆಂಟ್ರಲ್ ಹಿಂದು ಕಾಲೇಜನ್ನು ಪ್ರಾರಂಭಿಸಿದರು ನಂತರ ಇದು ಬನಾರಸ್ ಹಿಂದು ಕಾಲೇಜ್ ಎಂದು ಪ್ರಸಿದ್ಧಿಪಡೆಯಿತು
ಅಲಿಘರ್ ಚಳುವಳಿ ಇದು ಸಯ್ಯದ್ ಅಹಮದ್ ಖಾನ್ ರಿಂದ ಪ್ರಾರಂಭಿಸಲ್ಪಟ್ಟು ಮುಸ್ಲಿಮರಿಗೆ ಪಾಶ್ಚಾತ್ಯ ಮತ್ತು ಉನ್ನತ ಶಿಕ್ಷಣ ನೀಡುವುದು ಇದರ ಪ್ರಮುಖ ಗುರಿಯಾಗಿದ್ದಿತು
ಸತ್ಯ ಶೋಧಕ ಸಮಾಜ ಇದು 1873ರಲ್ಲಿ ಜ್ಯೋತಿಬಾ ಫುಲೆಯವರಿಂದ ಪ್ರಾರಂಭವಾಗಿ ಬ್ರಾಹ್ಮಣಿಕೆಯ ವಿರುದ್ಧದ ಧ್ವನಿಯಾಗಿ ಹಿಂದುಳಿದ ಮತ್ತು ಕೆಳವರ್ಗಗಳಿಗೆ ಶಿಕ್ಷಣ ನೀಡುವುದರ ಜೊತೆಗೆ ಅವರ ಹಕ್ಕುಗಳನ್ನು ಎತ್ತಿಹಿಡಿಯುವುದಾಗಿತ್ತು

ಜಸ್ಟೀಸ್ ಪಾರ್ಟಿ ಮೂಮೆಂಟ್ ಈ ಚಳುವಳಿಯು  ಟಿ.ಎಂ.ನಾಯರ್ ಮತ್ತು ಆರ್.ಟಿ.ಚೆಟ್ಟಿಯವರಿಂದ ಪ್ರಾರಂಭವಾಗಿ  ಇವರು ಸ್ಥಾಪಿಸಿದ ಸೌತ್ ಇಂಡಿಯನ್ ಲಿಬರಲ್ ಫೆಡರೇಷನ್ ಸಂಘದ ಮೂಲಕ ಆಡಳಿತದಲ್ಲಿ ಮತ್ತು ಸಮಾಜದಲ್ಲಿ ಬ್ರಾಹ್ಮಣಿಕೆಯ ಪ್ರಾಭಲ್ಯ ತಡೆಯುವುದಾಗಿತ್ತು

ಸೆಲ್ಫ್ ರೆಸ್ಪೆಕ್ಟ್ ಮೂಮೆಂಟ್ ಇದು ತಮಿಳುನಾಡಿನಲ್ಲಿ 1925ರಲ್ಲಿ ಇ.ವಿ.ರಾಮಸ್ವಾಮಿ ನಾಯ್ಕರ್ ರವರಿಂದ ಪ್ರಾರಂಭವಾಯಿತು.

ಡಾ: ಅಂಬೇಡ್ಕರ್ ರವರು ಬಹಿಷ್ಕೃತ ಹಿತಕಾರಿಣಿ ಸಭಾ, ಬಹಿಷ್ಕೃತ ಭಾರತ ಮತ್ತು ಸಮಾಜ ಸಮತಾ ಸಭ ಎಂಬ ಸಂಸ್ಥೆಯನ್ನು ಹಿಂದುಳಿದ ವರ್ಗದವರಿಗಾಗಿ ಪ್ರಾರಂಭಿಸಿದರು, ಇವರು ಪರಿಶಿಷ್ಟ ಜಾತಿಗಳ ಫೆಡರೇಷನ್ ಎಂಬ ರಾಜಕೀಯ ಪಾರ್ಟಿಯನ್ನು ಸ್ಥಾಪಿಸಿದರು. 

ನೀಲಿ ಬೆಳೆಗಾರರ ದಂಗೆ ಈ ದಂಗೆಯು 1860ರಲ್ಲಿ ಬಂಗಾಳದ ನೀಲಿ ಬೆಳೆಗಾರರು ಮತ್ತು ಬ್ರಿಟೀಷ್ ಕಾರ್ಖಾನೆಗಳ ವಿರುದ್ಧ ನೆಡೆಯಿತು ಇದರ ನೇತೃತ್ವವನ್ನು ವಹಿಸಿದವರು ದಿಗಂಬರ ಬಿಸ್ವಾಸ್ ಮತ್ತು ವಿಷ್ಣು ಬಿಸ್ವಾಸ್ ಈ ದಂಗೆಗೆ ಸಂಬಂಧ ಪಟ್ಟಂತೆ ದೀನ ಬಂಧುಮಿತ್ರರವರು ನೀಲ ದರ್ಪಣ್ ಮಿತ್ರ ಎಂಬ ಕೃತಿ ರಚಿಸಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: 1885ರಲ್ಲಿ ಏ.ಓ.ಹ್ಯೂಂ ರವರಿಂದ ಪ್ರಾರಂಭಿಸಲ್ಪಟ್ಟಿತು "Safety Volve" ಎಂಬುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಸಂಬಂಧಪಟ್ಟಿದೆ.  ಇದರ ಮೊದಲ ಸಮ್ಮೇಳನವು ಬಾಂಬೆಯಲ್ಲಿ ಡಬ್ಲ್ಯೂ.ಸಿ.ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ ಲಾರ್ಡ್ ಡರ್ಫಿನ್ ವೈಸ್ರಾಯ್ ಕಾಲದಲ್ಲಿ ಆಯಿತು. ಈ ಸಮ್ಮೇಳನಕ್ಕೆ 72 ಜನ ಪ್ರತಿನಿಧಿಗಳು ಆಗಮಿಸಿದ್ದರು. 1907ರ ಸೂರತ್ ಅಧಿವೇಷಣದಲ್ಲಿ ಸೌಮ್ಯವಾದಿಗಳು ಮತ್ತು ಉಗ್ರಗಾಮಿಗಳೆಂದು ಇಬ್ಬಾಗವಾಯಿತು.  ಉಗ್ರಗಾಮಿಗಳ ಗುಂಪಿನಲ್ಲಿ ಲಾಲ್, ಬಾಲ್ ಪಾಲ್ ಎಂದು ಹೆಸರಾಗಿದ್ದ ಲಾಲ ಲಜಪತರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್ ಪ್ರಮುಖವಾಗಿದ್ದರು ಇವರ ಅಧ್ಯಕ್ಷತೆಯನ್ನು ಅರವಿಂದೋ ಘೋಷ್ ವಹಿಸಿದ್ದರು.  ಇದರ ಮೊದಲ ಮುಸ್ಲಿಂ ಅಧ್ಯಕ್ಷರು ಬಹ್ರುದ್ದೀನ್ ತಯ್ಯಬ್ಜಿ.  ಇದರ ಮೊದಲ ಮಹಿಳಾ ಅಧ್ಯಕ್ಷರು ಆನಿಬೆಸೆಂಟ್.  1929ರ ಲಾಹೋರ್ ಅಧಿವೇಷಣದಲ್ಲಿ ಜವಾಹರ್ ಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ಪೂರ್ಣಸ್ವರಾಜ ಘೋಷಣೆಯನ್ನು ಕೈಗೊಳ್ಳಲಾಯಿತು.  1931ರ ಕರಾಚಿ ಅಧಿವೇಷಣದಲ್ಲಿ ವಲ್ಲಭಬಾಯಿ ಪಾಟೀಲರ ಅಧ್ಯಕ್ಷತೆಯಲ್ಲಿ ಮೂಲಭೂತಹಕ್ಕು ಮತ್ತು ರಾಷ್ಟ್ರೀಯ ವಿತ್ತ ಕಾರ್ಯಕ್ರಮದ ನಿರ್ಣಯ ತೆಗೆದುಕೊಳ್ಳಲಾಯಿತು.  1938 ರ ಹರಿಪುರ ಅಧಿವೇಷಣದಲ್ಲಿ ಸುಭಾಷ್ ಚಂದ್ರ ಬೋಸರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಯೋಜನಾ ಆಯೋಗ ಸ್ಥಾಪಿತವಾಯಿತು ಮತ್ತು 1939ರಲ್ಲಿ ತ್ರಿಪುರ ಅಧಿವೇಷಣದಲ್ಲಿ ಬೋಸರು ಪುನ: ಆಯ್ಕೆಯಾದಾಗ ಗಾಂಧೀಜಿಯವರು ಅಸಮದಾನಗೊಂಡಿದ್ದರಿಂದ ಬೋಸರು ರಾಜಿನಾಮೆನೀಡಿದರು, ಅವರ ಜಾಗದಲ್ಲಿ ರಾಜೇಂದ್ರ ಪ್ರಸಾದರು ಅಧ್ಯಕ್ಷತೆ ವಹಿಸಿದ್ದರು.  1906 ಕಲ್ಕತ್ತಾ ಅಧಿವೇಷಣದಲ್ಲಿ ಸ್ವರಾಜ್ ಅಂದರೆ ಸಂಪೂರ್ಣ ಸ್ವಸರ್ಕಾರವು ಭಾರತೀಯರ ಗುರಿಎಂದು ನಿರ್ಣಯ ಅಂಗೀಕರಿಸಲಾಯಿತು.

ಬಂಗಾಳದ ವಿಭಜನೆ:  16-10-1905ರಂದು ಲಾರ್ಡ್ ಕರ್ಜನ್ ಕಾಲದಲ್ಲಿ ರಾಷ್ಟ್ರೀಯ ಚಳುವಳಿಯನ್ನು ಹತ್ತಿಕ್ಕಲು ವಿಭಜಿಸಲಾಯಿತು.  ನಂತರ ರಾಷ್ಟ್ರಪ್ರೇಮಿಗಳ ತೀವ್ರ ಒತ್ತಡದಿಂದ 1911ರಲ್ಲಿ ಮತ್ತೆ ಒಂದುಗೂಡಿಸಲಾಯಿತು.

ಸ್ವದೇಶಿ ಚಳುವಳಿ:
1905ರಲ್ಲಿ ಬನಾರಸ್ ಅಧಿವೇಷಣದಲ್ಲಿ ಮೊದಲಬಾರಿಗೆ ಕರೆನೀಡಲಾಯಿತು.  ಈ ಕರೆಯ ಪ್ರಕಾರ ಬ್ರಿಟೀಷರ ವಸ್ತುಗಳನ್ನು ಮತ್ತು ಬಟ್ಟೆಗಳನ್ನು ಉಪಯೋಗಿಸದಂತೆ ಮತ್ತು ಸುಡುವಂತೆ ಪ್ರತಿಜ್ಞೆ ಕೈಗೊಳ್ಳಲಾಯಿತು. 

ಮುಸ್ಲಿಂ ಲೀಗ್ ಇದು ಅಗಾಖಾನ್ ರವರ ಅಧ್ಯಕ್ಷತೆಯಲ್ಲಿ 1906ರಲ್ಲಿ ಪ್ರಾರಂಭಿಸಲಾಯಿತು.  ಇದರ ಪ್ರಕಾರ ಮುಸ್ಲಿಮರಿಗೆ ಪ್ರತ್ಯೇಕ ಚುನಾವಣೆಗೆ ಆದೇಶಿಸಲಾಯಿತು. 

ಗದ್ದಾರ್ ಪಕ್ಷ ಇದು 1913ರಲ್ಲಿ ಲಾಲ ಹರದಯಾಳ್, ತಾರಕನಾಥ್ ದಾಸ್ ಮತ್ತು ಸೋಹನ್ ಸಿಂಗರಿಂದ ಪ್ರಾರಂಭವಾಯಿತು ಇದರ ಮುಖ್ಯಕಛೇರಿಯು ಸ್ಯಾನ್ ಫ್ರಾನ್ಸಿಸ್ಕೋದಲ್ಲಿತ್ತು. 
ಹೋಂ ರೂಲ್ ಚಳುವಳಿ - ತಿಲಕರು ಮಾಂಡಲೆ ಜೈಲಿನಿಂದ ಹಿಂತಿರುಗಿದ ನಂತರ 1916ರಲ್ಲಿ ಆನಿಬೆಸಂಟರೊಡಗೂಡಿ ಹೋಂರೂಲ್ ಚಳುವಳಿಯನ್ನು ಸ್ಥಾಪಿಸಿದರು ಇದರ ಮುಖ್ಯ ಉದ್ದೇಶ ಬ್ರಿಟೀಷರಿಂದ ಸಂಪೂರ್ಣ ಆಡಳಿತವನ್ನು ಕಿತ್ತುಕೊಂಡು ದೇಶೀಯವಾಗಿ ಆಡಳಿತ ನೆಡೆಸುವುದಾಗಿತ್ತು.  ಈ ಚಳುವಳಿಯಲ್ಲಿ ತಿಲಕರು ಸ್ವರಾಜ್ಯ ನನ್ನ ಜನ್ಮಸಿದ್ದಹಕ್ಕು ಇದನ್ನು ಪಡೆದೇ ತೀರುತ್ತೇನೆ ಎಂಬ ಘೋಷಣೆಯನ್ನು ಮಾಡಿದರು. 
ಲಕ್ನೋ ಒಪ್ಪಂದ 1916ರಲ್ಲಿ ನೆಡೆದು ಇದು ಟರ್ಕಿಯ ರಾಜನ ಮೇಲೆ ಬ್ರಿಟೀಷರು ಹೂಡಿದ ಯುದ್ಧದ ವಿರುದ್ಧವಾಗಿದ್ದಿತು. 
ಆಗಸ್ಟ್ ಘೋಷಣೆ: 1917ರಲ್ಲಿ ಬ್ರಿಟೀಷರಿಂದ ಘೋಷಿಸಲ್ಪಟ್ಟು ಇದರ ಪ್ರಕಾರ ಬ್ರಿಟೀಷ್ ಆಡಳಿತದಲ್ಲಿ ಭಾರತೀಯರನ್ನು ಹೆಚ್ಚಾಗಿ ಸೇರಿಸಿಕೊಳ್ಳುವುದಾಗಿತ್ತು. 

ರೌಲತ್ ಕಾಯ್ದೆ ಇದು 18-3-1919 ರಲ್ಲಿ ಜಾರಿಯಾಗಿ ಇದರ ಪ್ರಕಾರ ಬ್ರಿಟೀಷರಿಗೆ ಅನುಮಾನ ಬಂದ ವ್ಯಕ್ತಿಯನ್ನು ದೇಶದ್ರೋಹದ ಆಪಾದನೆಯ ಮೇಲೆ ಯಾವುದೇ ವಿಚಾರಣೆಯಿಲ್ಲದೆ 2 ವರ್ಷಗಳವರೆಗೆ ಜೈಲಿನ ಶಿಕ್ಷೆಯನ್ನು ನೀಡಬಹುದಾಗಿತ್ತು.  ಮುಂದೆ ಈ ಕಾಯ್ದೆಯು ಗಾಂಧೀಜಿಯವರಿಗೆ ಅಸಹಕಾರ ಚಳುವಳಿ ನಡೆಸಲು ಕಾರಣವಾಯಿತು.
ಜಲಿಯನ್ ವಾಲಾಬಾಗ್ ದುರಂತ  ಇದು 13-4-1919ರಲ್ಲಿ ನಡೆಯಿತು ಇದಕ್ಕೆ ಕಾರಣ ಪಂಜಾಬಿನಲ್ಲಿ ರೌಲತ್ ಕಾಯ್ದೆಯ ವಿರುದ್ಧ ಪ್ರತಿಭಟಿಸುತಿದ್ದಾಗ ಬ್ರಿಟೀಷರು ಡಾ|| ಕಿಚ್ಲು & ಸತ್ಯಪಾಲ್ ಅವರನ್ನು ಬಂಧಿಸಿದರು ಇದರ ವಿರುದ್ಧ ಜನರು ಜಲಿಯನ್ ವಾಲಾಬಾಗ್ ನಲ್ಲಿ ಸಭೆ ಸೇರಿದಾಗ ಆ ಸಭೆಯನ್ನು ಹತ್ತಿಕ್ಕಲು ಜನರಲ್ ಓ ಡಯರ್ ನನ್ನು ನೇಮಿಸಲಾಯಿತು ಇವನು ಆ ಜನರಿಗೆ ಯಾವುದೇ ಆದೇಶ ನೀಡದೆ ಬೇಕಾಬೆಟ್ಟಿ ಗುಂಡುಹಾರಿಸಿದಾಗ ಸಭೆ ಸೇರಿದ್ದ ನೂರಾರು ಜನರು ಹತ್ಯೆಯಾದರು ಮತ್ತು ಸಾವಿರಾರು ಜನರು ಗಾಯಾಳುಗಳಾದರು. ಈ ಘಟನೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳಾದಾಗ ಬ್ರಿಟೀಷರು ಇದರ ವಿಚಾರಣೆಗಾಗಿ ಹಂಟರ್ ಆಯೋಗವನ್ನು ನೇಮಿಸಿದರು.  ಇದನ್ನು ಪ್ರತಿಭಟಿಸಿ ರವೀಂದ್ರನಾಥ ಟ್ಯಾಗೂರರು ತಮಗೆ ನೀಡಿದ್ದ ನೈಟ್ ಹುಡ್ ಪ್ರಶಸ್ತಿಯನ್ನು ಹಿಂತಿರುಗಿಸಿದರು. 
ಈ ಘಟನೆಗೆ ಪ್ರತಿಕಾರವಾಗಿ ಸರ್ದಾರ್ ಉಧಮ್ ಸಿಂಗರು ಲಂಡನ್ನಿನಲ್ಲಿದ್ದ ಜನರಲ್ ಓ ಡಯರ್ ನನ್ನು ಹುಡುಕಿಕೊಂಡು ಹೋಗಿ ಲಂಡನ್ನಿನಲ್ಲಿ ಹತ್ಯೆಗೈದರು.

ಕಿಲಾಫತ್ ಚಳುವಳಿ 1920 ರಲ್ಲಿ ಮೊಹಮ್ಮದ್ದ ಆಲಿ ಮತ್ತು ಶೌಕತ್ ಆಲಿ ಅವರಿಂದ ಪ್ರಾರಂಭವಾಯಿತು.
ಅಸಹಕಾರ ಚಳುವಳಿ ಸೆಪ್ಟೆಂಬರ್ 1920 ಇದು ರೌಲತ್ ಕಾಯ್ದೆ ಮತ್ತು ಬ್ರಿಟೀಷರ ಧೋರಣೆಯ ವಿರುದ್ಧ ಗಾಂಧೀಜಿಯವರು ಬ್ರಿಟೀಷ್ ಸರ್ಕಾರದ ವಿರುದ್ಧ ನೀಡಿದ ಕರೆಯಾಗಿತ್ತು ಇದರ ಪ್ರಕಾರ ಎಲ್ಲಾ ಭಾರತೀಯರಿಗೆ ಬ್ರಿಟೀಷರು ನೀಡಿದ್ದ ಪದಕ ಮತ್ತು ಬಿರುದುಗಳನ್ನು ವಾಪಸ್ ನೀಡುವುದು, ಸರ್ಕಾರದಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಭಾರತೀಯರು ರಾಜಿನಾಮೆ ನೀಡುವುದು, ಕೋರ್ಟು ಕಛೇರಿಗಳಿಗೆ ಬಹಿಷ್ಕಾರ ಹಾಕುವುದು, ಸೇನೆಯ ಭಾರತೀಯರು ಸೇನೆ ಬಿಟ್ಟುಬರುವುದು ಮತ್ತು ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.  ಮುಂದೆ ಚೌರಿ ಚೌರ ಘಟನೆಯ ನಂತರ ಈ ಚಳುವಳಿಯನ್ನು ಹಿಂತೆಗೆದುಕೊಳ್ಳಲಾಯಿತು.

ಚೌರಿ-ಚೌರ ಘಟನೆ 1922ರಲ್ಲಿ ಗೋರಖ್ ಪುರದ ಚೌರಿ-ಚೌರ ಎಂಬಲ್ಲಿ  ಚಳುವಳಿಯಲ್ಲಿ ಭಾಗವಹಿಸಿದ್ದವರಮೇಲೆ ಪೊಲೀಸರು ವಿನಾಕಾರಣ ಹೊಡೆದ ಪರಿಣಾಮ ಚಳುವಳಿಗಾರರು ಅಲ್ಲಿದ್ದ ಪೊಲೀಸರನ್ನು ಕೂಡಿಹಾಕಿ ಸುಟ್ಟುಬಿಟ್ಟರು ಇದರ ಪರಿಣಾಮವಾಹಿ ಗಾಂಧೀಜಿಯವರು ತಮ್ಮ ಅಹಿಂಸಾ ಚಳುವಳಿಗೆ ಧಕ್ಕೆ ಬಂದಿತೆಂದು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು
ಸ್ವರಾಜ್ ಪಕ್ಷ 1923ರಲ್ಲಿ ಮೋತಿಲಾಲ್ ನೆಹರು, ಚಿತ್ತರಂಜನ್ ದಾಸ್ ಮತ್ತು ಕೇಲ್ಕರ್ ರವರು ಬ್ರಿಟೀಷ್ ಸರ್ಕಾರದ ವಿರುದ್ಧ ಚುನಾವಣೆಯಲ್ಲಿ ಸ್ಪರ್ದಿಸಲು ಸ್ಥಾಪಿಸಿದರು

ಸೈಮನ್ ಆಯೋಗ ಭಾರತದಲ್ಲಿ ರಾಜಕೀಯ ಪರಿಸ್ಥಿಯನ್ನು ಅವಲೋಕಿಸಲು ಬ್ರಿಟೀಷ್ ಸರ್ಕಾರವು 1927ರಲ್ಲಿ  ಜಾನ್ ಸೈಮನ್ ರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ ಭಾರತಕ್ಕೆ ಕಳುಹಿಸಿಕೊಟ್ಟಿತು ಆ ಆಯೋಗದಲ್ಲಿ ಭಾರತೀಯರಾರು ಇಲ್ಲದಿದ್ದರಿಂದ ಎಲ್ಲಾ ಭಾರತೀಯರು ಇದನ್ನು ಪ್ರತಿಭಟಿಸಿದರು.

ನೆಹರುವರದಿ
1928ರಲ್ಲಿ ಸೈಮನ್ ಆಯೋಗವನ್ನು ಪ್ರತಿಭಟಿಸಿದನಂತರ ಭಾರತದಲ್ಲಿ ಸ್ವಂತವಾಗಿಯೇ ಸಂವಿಧಾನವನ್ನು ರಚಿಸಲು ಮೊತಿಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ವರದಿಯನ್ನು ಸಲ್ಲಿಸಲಾಯಿತು ಈ ವರದಿಯು ನೆಹರು ವರದಿಯೆಂದು ಪ್ರಖ್ಯಾತವಾಗಿದೆ

ಲಾಹೋರ್ ಸಮಾವೇಶ  19-12-1929 ರಲ್ಲಿ ಜವಾಹರ್ ಲಾಲ್ ನೆಹರು ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಷಣ ನೆಡೆಯಿತು. ಈ ಸಮಾವೇಶದಲ್ಲಿ ನೆಹರುರವರು 26-1-1930ರಂದು ಪೂರ್ಣಸ್ವರಾಜ್ಯ ಘೋಷಣೆಮಾಡಿದರು.  31-12-1929ರಂದು ಈ ಸಮಾವೇಶದಲ್ಲಿ ಮೊದಲ ಬಾರಿಗೆ ತ್ರಿಮರ್ಣ ಧ್ವಜ ಹಾರಿಸಲಾಯಿತು ಲಾಹೋರ್ ನ ರಾವಿ ನದಿಯ ದಡದಲ್ಲಿ ಮತ್ತು 26-1-1930ರಂದು ಸ್ವತಂತ್ರದಿನ ಎಂದು ಘೋಷಿಸಲಾಯಿತು.



ಭಾರತದ ಹೊರಗಿನ ಸ್ವತಂತ್ರ 

ಕ್ರಾಂತಿಕಾರಿ ಸಂಘಗಳು

ಇಂಡಿಯಾ ಹೌಸ್ - ಇದನ್ನು ಸ್ವಾಮಿ ಕೃಷ್ಣ ವರ್ಮರು ಲಂಡನ್ನಿನಲ್ಲಿ ಸ್ಥಾಪಿಸಿದರು.

 ಅಭಿನವ ಭಾರತ - ಇದನ್ನು ವಿ.ಡಿ.ಸಾವರ್ಕರ್ ರವರು 1906ರಲ್ಲಿ ಲಂಡನ್ನಿನಲ್ಲಿ ಸ್ಥಾಪಿಸಿದರು.

ಗದ್ದರ್ ಪಾರ್ಟಿ - ಇದನ್ನು 1913ರಲ್ಲಿ ಲಾಲಾ ಹರದಯಾಳ್  ಮತ್ತು ತಾರಕ್ ನಾಥ್ ದಾಸ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 
ಸ್ಥಾಪಿಸಿದರು.  

ಲೀಗ್ ಮತ್ತು ಗೌರ್ನಮೆಂಟ್ ಇಂಡಿಯನ್ ಇಂಡಿಪೆಂಡೆನ್ಸ್ - ಇದನ್ನು 1942 ರಲ್ಲಿ ರಾಸ್ ಬಿಹಾರಿ ಬೋಸರು ಟೋಕಿಯೋದಲ್ಲಿ ಸ್ಥಾಪಿಸಿದರು, 

ಲೀಗ್ ಆಫ್ ಇಂಡಿಯನ್ ನ್ಯಾಷನಲ್ ಆರ್ಮಿ  - ಇದನ್ನು 1942ರಲ್ಲಿ ರಾಸ್ ಬಿಹಾರಿ ಬೋಸರು ಟೋಕಿಯೋದಲ್ಲಿ ಸ್ಥಾಪಿಸಿದರು.

 ಇಂಡಿಯನ್ ನ್ಯಾಷನಲ್ ಆರ್ಮಿ - ಇದು ಸುಭಾಷ್ ಚಂದ್ರ ಭೋಸರಿಂದ ಸ್ಥಾಪಿತವಾಗಿದ್ದು ಇದರ ಪ್ರಧಾನ ಕಛೇರಿಗಳು ರಂಗೂನ್ ಮತ್ತು ಸಿಂಗಪೂರದಲ್ಲಿತ್ತು ಇದರ ಮಹಿಳಾ ಘಟಕದ ಹೆಸರು ಝಾನ್ಸಿ ರೆಜಿಮೆಂಟ್ ಇದರ ಕಮ್ಯಾಂಡರ್ ಲಕ್ಷ್ಮಿ ಸೆಹಗಲ್.


ಸ್ವತಂತ್ರ ಪೂರ್ವ ಭಾರತದ ಪ್ರಮುಖ ಪತ್ರಿಕೆ ಮತ್ತು 

ಸಂಪಾದಕರು


ಬಂಗಾಳಗೆಜೆಟ್- 
ಇದು ಭಾರತದ ಮೊದಲ ಸಮಾಚಾರ ಪತ್ರಿಕೆಯಾಗಿದ್ದು ಇದರ ಸಂಪಾಕರು ಹಿಕಿ. 

ಕೇಸರಿ ಮತ್ತು ಮರಾಠ - ಪತ್ರಿಕೆಗಳ ಸಂಪಾದಕರು ಬಾಲಗಂಗಾಧರನಾಥ ತಿಲಕರು.  

ವಂದೇ ಮಾತರಂ - ಪತ್ರಿಕೆಯ ಸಂಪಾದಕರು ಅರವಿಂದೋ ಘೋಷ್.

ಹಿಂದು ಪತ್ರಿಕೆಯ ಸಂಪಾದಕರು ರಾಘವಾಚಾರ್ಯ & ಅಯ್ಯರ್.

ಸೋಮ್ ಪ್ರಕಾಶ ಪತ್ರಿಕೆಯ ಸಂಪಾದಕರು ಈಶ್ವರಚಂದ್ರ ವಿದ್ಯಾಸಾಗರ.

ಹಿಂದುಸ್ಥಾನ್ ಪತ್ರಿಕೆಯ ಸಂಪಾದಕರು ಮಾಳವೀಯ.  

ಮೂಕನಾಯಕ್ ಪತ್ರಿಕೆಯ ಸಂಫಾದಕರು ಡಾ|| ಬಿ.ಆರ್.ಅಂಬೇಡ್ಕರ್.

ಅಲ್ ಹಿಲಾಲ್ ಪತ್ರಿಕೆಯ ಸಂಫಾದಕರು ಅಬ್ದುಲ್ ಕಲಾಂ ಅಜಾದ್. 

ಇಂಡಿಪೆಂಡೆಂಟ್ ಪತ್ರಿಕೆಯ ಸಂಪಾದಕರು ಮೊತಿಲಾಲ್ ನೆಹರು.

ಪಂಜಾಬಿ ಪತ್ರಿಕೆಯ ಸಂಪಾದಕರು ಲಾಲ ಲಜಪತರಾಯ್.

ನ್ಯೂ ಇಂಡಿಯಾ ಪತ್ರಿಕೆಯ ಸಂಪಾದಕರು ಆನಿಬೆಸೆಂಟ್.

ಸೌಮತ್ ಕುಮಿದಿ ಮತ್ತು ಮೀರತ್ - ಉಲ್ - ಅಕ್ಬರ್ ಪತ್ರಿಕೆಯ ಸಂಪಾದಕರು ರಾಜಾ ರಾಮ ಮೊಹನರಾಯ್. 

ಇಂಡಿಯನ್ ಮಿರರ್ ಪತ್ರಿಕೆಯ ಸಂಪಾದಕರು ದೇವೇಂದ್ರನಾಥ ಟ್ಯಾಗೂರ್. 

ನವಜೀವನ, ಯಂಗ್ ಇಂಡಿಯಾ, ಹರಿಜನ ಪತ್ರಿಕೆಯ ಸಂಪಾದಕರು ಗಾಂದೀಜಿ,  

ಪ್ರಬುಧ್ಧ ಭಾರತ ಮತ್ತು ಉದ್ಬೋದನ ಪತ್ರಿಕೆಯ ಸಂಪಾದಕರು ಸ್ವಾಮಿ ವಿವೇಕಾನಂದ.





ಪ್ರಮುಖ ಸ್ವತಂತ್ರ ಹೋರಾಟಗಾರರ 

ಲೇಖನಗಳು:


ಗುಲಾಮಗಿರಿ- ಜ್ಯೋತಿಬಾಪುಲೆ, 

ಫಕ್ತೂನ್-ಖಾನ್ಅಬ್ದುಲ್ ಗಫರ್ ಖಾನ್,

ಎಕನಾಮಿಕ್ ಹಿಸ್ಟರ್ ಆಫ್ ಇಂಡಿಯಾ - ಆರ್.ಸಿ.ದತ್ತ್,  

ಪಾತೇರ್ ಪಾಂಚಾಲಿ - ಬಿ.ಬಿ.ಬ್ಯಾನರ್ಜಿ,  

ಎ ಗಿಫ್ಟ್ ಆಫ್ ಮನೋಥಿಸೀಸ್ - ರಾಜಾ ರಾಮ್ ಮೋಹನ್ ರಾಯ್,  

ಆನಂದ ಮಠ ಮತ್ತು ಸೀತಾರಾಮ - ಬಂಕಿಮ ಚಂದ್ರ ಚಟರ್ಜಿ, 

ಇಂಡಿಯನ್ ಸ್ಟ್ರಗಲ್ - ಸುಭಾಷ ಚಂದ್ರ ಭೋಸ್, 

ಪಾವರ್ಟಿ ಅಂಡ್ ಅನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ - ದಾದಾ ಬಾಯಿ ನವರೋಜಿ,  

ಅನ್ ಹ್ಯಾಪಿ ಇಂಡಿಯಾ - ಲಾಲಾ ಲಜಪತರಾಯ್,  

ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ - ವಿ.ಡಿ.ಸಾವರ್ಕರ್,  

ಇಂಡಿಯಾ ಡಿವೈಡೆಡ್ - ರಾಜೇಂದ್ರ ಪ್ರಸಾದ್,

ದಿ ಡಿಸ್ಕವರಿ ಆಫ್ ಇಂಡಿಯಾ, ಗ್ಲಿಂಪ್ಸಸ್ ಆಫ್.



ಉಪ್ಪಿನ ಸತ್ಯಾಗ್ರಹ:

 12-3-1930ರಂದು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ (ಬ್ರಿಟೀಷ್ ಆಢಳಿತದ ದೌರ್ಜನ್ಯದ ವಿರುದ್ಧ ಸಾಂಕೇತಿಕವಾಗಿ) ಉಪ್ಪಿನ ಮೇಲೆ ವಿಧಿಸಿದ್ದ ಕರದ ವಿರುದ್ಧವಾಗಿ ಉಪ್ಪಿನ  ಸತ್ಯಾಗ್ರಹವನ್ನು ಆರಂಭಿಸಿದರು ಸುಮಾರು 78 ಜನ ಅನುಯಾಯಿಗಳೊಡನೆ ಸಬರಮತಿ ಆಶ್ರಮದಿಂದ ದಂಡಿಯ ಸಮುದ್ರ ತೀರದವರೆಗೆ ಸುಮಾರು 290 ದಿನಗಳ ಕಾಲ ಪಾದಯಾತ್ರೆಮಾಡಿ 6-4-1930ರಂದು ಸ್ವತ: ಉಪ್ಪನ್ನು ತಯಾರಿಸುವ ಮೂಲಕ ಬ್ರಿಟೀಷರ ಕಾನೂನನ್ನು ಬಹಿಷ್ಕರಿಸಿ ನಾಗರೀಕ ಅಸಹಕಾರ ಚಳುವಳಿಗೆ ನಾಂದಿಹಾಡಿದರು.

          ಮೊದಲ ದುಂಡು ಮೇಜಿನ ಸಭೆ 12-11-1930ರಂದು ಸೈಮನ್ ಕಮಿಷನ್ನಿನ ವಿಚಾರವಾಗಿ ಲಂಡನ್ನಿನಲ್ಲಿ ನೆಡೆಯಿತು,  ಎರಡನೆ ದುಂಡು ಮೇಜಿನ ಸಭೆ 1931 ರಲ್ಲಿ ಗಾಂಧೀಜಿಯವರು ಮತ್ತು ರಾಮ್ಸೆ ಮ್ಯಾಕ್ ಡೊನಾಲ್ಡ್  ಉಪಸ್ಥಿಯಲ್ಲಿ ಲಂಡನ್ನಿನಲ್ಲಿ ನೆಡೆಯಿತು ಈ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಚುನಾವಣೆ ನೆಡೆಸಲು ಆಗ್ರಹಿಸಲಾಯಿತು ಇದರಿಂದ ಸಭೆಯು ಯಶಸ್ವಿಯಾಗಲಿಲ್ಲ.  ಸಭೆಮುಗಿಸಿಕೊಂಡು ಬಂದ ಗಾಂಧೀಜಿಯವರು 1932ರಲ್ಲಿ ಅಸಹಕಾರ ಚಳುವಳಿಗೆ ಕರೆನೀಡಿದರು ಈ ಚಳುವಳಿಯು ನ್ಯಾಯಬಾಹಿರವೆಂದು ಬ್ರಿಟೀಷರು ಗಾಂಧೀಜಿಯವರನ್ನು ಯರವಾದ ಜೈಲಿಗೆ ಹಾಕಿದರು.  ನಂತರ ಬ್ರಿಟೀಷರ ಕುಮ್ಮಕ್ಕಿನಿಂದ ದೇಶದಲ್ಲಿ ಜನಾಂಗೀಯ ಗಲಬೆಯುಂಟಾಗಿ ಅಪಾರ ಸಾವುನೋವು ಉಂಟಾದ್ದರಿಂದ ಗಾಂಧೀಜಿಯವರು ಯರವಾಡ ಜೈಲಿನಲ್ಲಿ ಆಮರಣಾಂತ ಉಪವಾಸ ಕೈಗೊಂಡರು.  ಮೂರನೆ ದುಂಡುಮೇಜಿನ ಸಭೆ 1932ರಲ್ಲಿ ನೆಡಯಿತು ಇದು ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ 1935 ಜಾರಿಯಾಗಲು ದಾರಿಯಾಯಿತು. ಡಾ|| ಬಿ.ಆರ್. ಅಂಬೇಡ್ಕರರು ಮೂರು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ ಏಕೈಕ ಸದಸ್ಯರಾಗಿದ್ದರು.

         ದಾದಾಬಾಯಿ ನವರೋಜಿಯವರು ಹೌಸ್ ಆಫ್ ಕಾಮನ್ಸ್ ನ ಸದಸ್ಯರಾದ ಮೊದಲ ಭಾರತೀಯರು,  ಖುದೈ ಖಿದ್ಮತ್ ದಾರ್ ಅಂದರ ಕೆಂಪಂಗಿ ದಳವನ್ನು ಪ್ರಾರಂಭಿಸಿದವರು ಖಾನ್ ಅಬ್ದುಲ್ ಗಫಾರ್ ಖಾನ್.



ಪ್ರಮುಖ ಸ್ವತಂತ್ರ ಹೋರಾಟಗಾರರ 

ಘೊಷಣೆಗಳು

ಸತ್ಯಮೇವ ಜಯತೆ : ಮದನ ಮೋಹನ ಮಾಳವೀಯ, 

ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುವೆ - ಬಾಲಗಂಗಾಧರ ತಿಲಕರು,  

ಜೈ ಜವಾನ್ ಜೈ ಕಿಸಾನ್ ಲಾಲ್ ಬಹದ್ದೂರ್ ಶಾಸ್ತ್ರಿ,

ನೀವು ನನಗೆ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ, 

ದಿಲ್ಲಿ ಚಲೊ  ಮತ್ತು ಜೈಹಿಂದ್ - ಸುಭಾಷ್ ಚಂದ್ರ ಬೋಸ್,  

ಮಾಡು ಇಲ್ಲವೇ ಮಡಿ - ಗಾಂಧೀಜಿ,

ಸೆಕ್ಯೂರ್ ದಿ ಫ್ರೀಡಂ ಆಫ್ ಇಂಡಿಯಾ ಅಟ್ ಎನಿ ಕಾಸ್ಟ್ - ಅರವಿಂದೋ ಘೋಷ್, 

ಇನ್ಕಿಲಾಬ್ ಜಿಂದಾಬಾದ್- ಭಗತ್ ಸಿಂಗ್.




ಕ್ರಿಪ್ಸ್ ನಿಯೋಗ

ಕ್ರಿಪ್ಸ್ ನಿಯೋಗ: 1939 ರಿಂದ 1945ರ ವರೆಗೆ ನೆಡೆದ ಎರಡನೇ ಮಹಾಯುದ್ಧದಲ್ಲಿ ಶತೃಸೈನ್ಯದ ಎದುರು ಬ್ರಿಟೀಷರ ಪ್ರಾಬಲ್ಯ ಕಡಿಮೆಯಾದಾಗ ಬ್ರಿಟೀಷರು ತಮ್ಮ ಪರ ಯುದ್ಧದಲ್ಲಿ ಭಾರತೀಯರು ಭಾಗವಹಿಸುವಂತೆ ಪ್ರೇರೇಪಿಸಿ ಅದಕ್ಕೆ ಪ್ರತಿಯಾಗಿ ಯುಧ್ಧ ಮುಗಿದ ನಂತರ  ಭಾರತೀಯರಿಗೆ ಸಂಪೂರ್ಣ ರಾಷ್ಟ್ರದ ಪ್ರಭುತ್ವವನ್ನು ನೀಡುತ್ತೇವೆ ಎಂದು ತಿಳಿಸಿ ಆ ಒಪ್ಪಂದಕ್ಕಾಗಿ 1942ರಲ್ಲಿ ಹೌಸ್ ಆಫ್ ಕಾಮನ್ಸ್ ಅಧ್ಯಕ್ಷರಾಗಿದ್ದ ಸ್ಟಾಫರ್ಡ್ ಕ್ರಿಪ್ಸ್ ನಿಯೋಗವನ್ನು ಭಾರತಕ್ಕೆ ಕಳುಹಿಸಿತು.  ಈ ನಿಯೋಗವು ಬ್ರಿಟೀಷರ ಅಧೀನದಲ್ಲಿ ಕೆಲವು ಭಾಗದಲ್ಲಿ ಮಾತ್ರ ಅಂದರೆ ಮಿಲಿಟರಿ ಮುಂತಾದ ಮುಖ್ಯ ಇಲಾಖೆಗಳು ಬ್ರಿಟೀಷರ ಅಧೀನದಲ್ಲಿದ್ದು ಕೆಲವನ್ನು ಮಾತ್ರ ಭಾರತೀಯರಿಗೆ ಸ್ವತಂತ್ರ ನೀಡಲು ಒಪ್ಪಿತು ಮತ್ತು ಭಾರತದ ಸಂವಿಧಾನವು ಸಂಫೂರ್ಣ ಬ್ರಟೀಷರಿಂದ ಮಾಡಲ್ಪಟ್ಟಿರಬೇಕೆಂದು ಹೇಳಿತು ಈ ಒಪ್ಪಂದವನ್ನು ಭಾರತೀಯರು ತೀವ್ರವಾಗಿ ವಿರೋಧಿಸಿದರು ಮತ್ತು ಗಾಂಧೀಜಿಯವರು ಇದನ್ನು ಪೋಸ್ಟ್ ಡೇಟೆಡ್ ಚೆಕ್ ಇನ್ ಎ ಕ್ರಾಷಿಂಗ್ ಬ್ಯಾಂಕ್ ಎಂದು ಟೀಕಿಸಿದರು ಮತ್ತು ಇದರ ವಿರುದ್ಧವಾಗಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು.


ಕ್ವಿಟ್ ಇಂಡಿಯಾ ಚಳುವಳಿ

ಕ್ವಿಟ್ ಇಂಡಿಯಾ ಚಳುವಳಿ : ಕ್ರಿಪ್ಸ್ ನಿಯೋಗದ ವೈಫಲ್ಯದ ನಂತರ ಬ್ರಿಟೀಷರ ನೀತಿಗೆ ವಿರುದ್ಧವಾಗಿ 08-08-1942ರಲ್ಲಿ ಗಾಂಧೀಜಿಯವರು ಬಾಂಬೆಯಲ್ಲಿ ಬ್ರಿಟೀಷರೆ ಭಾರತಬಿಟ್ಟು ತೊಲಗಿ ಚಳುವಳಿಗೆ ಕರೆನೀಡಿದರು.  ಈ ಚಳುವಳಿಯಲ್ಲಿ ಗಾಂಧೀಜಿಯವರು ಮಾಡು ಇಲ್ಲವೆ ಮಡಿ ಘೋಷಣೆಮಾಡಿದರು ಇದಕ್ಕೆ ಪ್ರತಿಯಾಗಿ ಬ್ರಿಟೀಷರು ಗಾಂಧೀಜಿಯವರನ್ನು ಅಗಾಖಾನ್ ಅರಮನೆಯಲ್ಲಿ ಗೃಹಬಂಧನದಲ್ಲಿಟ್ಟರು ನಂತರ  ಜೆ.ಪಿ.ನಾರಾಯಣ್, ಲೋಹಿಯಾ ಮತ್ತು ಅರುಣಾ ಆಸಿಫ್ ಆಲಿಯವರು ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು, ಈ ಚಳುವಳಿಯು ಕಾಂಗ್ರೆಸ್ ರೇಡಿಯೋದಲ್ಲಿ ವಾಚಕಿಯಾಗಿದ್ದ ಉಷಾಮೆಹ್ತಾರವರಿಂದ ತೀವ್ರ ಸ್ವರೂಪ ಪಡೆಯಲು ಸಹಕಾರಿಯಾಯಿತು. ಆದರೆ ಚಳುವಳಿಯ ನೇತೃತ್ವ ವಹಿಸಬೇಕಾಗಿದ್ದ ನಾಯಕರಲ್ಲಿ ಹೆಚ್ಚಿನವರು ಜೈಲಿನಲ್ಲಿದ್ದಿದ್ದರಿಂದ ನಾಯಕತ್ವದ ಕೊರತೆಯಿಂದಾಗಿ ಚಳುವಳಿಗೆ ಹಿನ್ನೆಡೆಯಾಯಿತು.



ವೇವೆಲ್ ಪ್ಲಾನ್ 1945 ನಲ್ಲಿ,  

ಕ್ಯಾಬಿನೆಟ್ ಮಿಷನ್ ಪ್ಲಾನ್ 1946ನಲ್ಲಿ, 

ಮೌಂಟ್ ಬ್ಯಾಟನ್ ಪ್ಲಾನ್ 1947ರಲ್ಲಿ, 

ರೆಗ್ಯುಲೇಟಿಂಗ್ ಆಕ್ಟ್ 1773ರಲ್ಲಿ,  

ಪಿಟ್ಸ್ ಇಂಡಿಯಾ ಆಕ್ಟ್ 1784ರಲ್ಲಿ,  

ಇಂಡಿಯನ್ ಕೌನ್ಸಿಲ್ ಆಕ್ಟ್ 1861ರಲ್ಲಿ, 

ಮಾರ್ಲೆ-ಮಿಂಟೋ ಆಕ್ಟ್ 1909ರಲ್ಲಿ, 

ಮಾಂಟೆಗೊ-ಚೆಲ್ಮ್ಸ್ ಫೋರ್ಡ್ ರೀಫಾರ್ಮ್ಸ್1919ರಲ್ಲಿ, 

ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ 1935ರಲ್ಲಿ, 

ಶಾರದ ಆಕ್ಟ್ - 1929ರಲ್ಲಿ ಜಾರಿಯಾಯಿತು.

ಜಮೀನ್ದಾರಿ ವ್ಯವಸ್ಥೆ         ಜಮೀನ್ದಾರಿ ವ್ಯವಸ್ಥೆಯು 1793 ಕಾರ್ನ್ವಾಲೀಸ್ ರಿಂದ ಪ್ರಾರಂಭವಾಯಿತು.  ಇದು ಬಂಗಾಳ, ಬಿಹಾರ, ಒರಿಸ್ಸಾ ರಾಜ್ಯಗಳಲ್ಲಿ ಮುಖ್ಯವಾಗಿ ಈ ವ್ಯವಸ್ಥೆಯು ಜಾರಿಯಲ್ಲಿತ್ತು,

ರಾಯತ್ವಾರಿ ವ್ಯವಸ್ಥೆ ಇದು ಲಾರ್ಡ್ ಮುನ್ರೋ ಮತ್ತು ಚಾರ್ಲ್ಸ್ ರೀಡ್ ರವರಿಂದ ಪ್ರಾರಂಭವಾಯಿತು.  ಈ ವ್ಯವಸ್ಥೆಯ ಪ್ರಕಾರ ರಿಕಾರ್ಡಿಯೋ ಸಿದ್ದಾಂತದಂತೆ ನೇರವಾಗಿ ರೈತರು ಮತ್ತು ಸರ್ಕಾರದ ನಡುವೆ ಮಣ್ಣಿನ ಗುಣ ಮತ್ತು ಬೆಳೆಯ ವಿಧದಂತೆ ಸುಮಾರು 30 ವರ್ಷಗಳ ಒಪ್ಪಂದದಂತೆ ಕಂದಾಯ ನಿರ್ಧರಿಸಲಾಗುತ್ತಿತ್ತು.
 ಈ ವ್ಯವಸ್ಥೆಯು ಬಾಂಬೆ, ಮದ್ರಾಸ್ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಜಾರಿಯಲ್ಲಿದ್ದಿತು
ಮಹಲ್ವಾರಿ ವ್ಯವಸ್ಥೆ ಇದು ಜಮೀನ್ದಾರಿ ವ್ಯವಸ್ಥೆಯ ಮುಂದುವರೆದ ಭಾಗವಾಗಿದ್ದು ಕಂದಾಯವನ್ನು ಕಾಲಕಾಲಕ್ಕೆ ತಕ್ಕಂತೆ ಪಾವತಿಸಬೇಕಾಗಿತ್ತು ಈ ವ್ಯವಸ್ಥೆಯು ಗಂಗಾ ತೀರದ ಪ್ರದೇಶಗಳು, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶ ಮುಂತಾದ ಕಡೆ ಜಾರಿಯಲ್ಲಿತ್ತು

1857 ಮಾರ್ಚ್ 29ರಂದು ಸಿಪಾಯಿದಂಗೆಯು 19ನೇ ಇನ್ಫಾಂಟ್ರಯಲ್ಲಿದ್ದ ಮಂಗಲ್ ಪಾಂಡೆಯ ಮುಖಾಂತರ ಪ್ರಾರಂಭವಾಯಿತು ಇದಕ್ಕೆ ಪ್ರಮುಖ ಕಾರಣಗಳು ರಾಜಕೀಯ ಕಾರಣ,  ಆರ್ಥಿಕ ಕಾರಣ, ಸೈನಿಕ ಕಾರಣ, ಧಾರ್ಮಿಕ ಕಾರಣ, ಸಾಮಾಜಿಕ ಕಾರಣ ಮುಂತಾದವು ಈ ದಂಗೆಯಲ್ಲಿ ಭಾಗವಹಿಸಿದ್ದ ಪ್ರಮುಖ ವ್ಯಕ್ತಿಗಳು ದೆಹಲಿಯಿಂದ ಭಕ್ತಖಾನ್,  ಕಾನ್ಪುರದಿಂದ ನಾನಾಸಹೇಬ, ಅವಧ್ ಯಿಂದ ತಾತ್ಯಾಟೋಪಿ, ಝಾನ್ಸಿಯಿಂದ ರಾಣಿ ಲಕ್ಷೀಬಾಯಿ,  ಬಿಹಾರದಿಂದ ಕುನ್ವರ್ ಸಿಂಗ್ ಮತ್ತು ಅಮರ್ ಸಿಂಗ್, ಮಥುರದಿಂದ ದೇವಿಸಿಂಗ್ ಮತ್ತು ಮೀರತ್ ನಿಂದ ಕದಮ್ ಸಿಂಗ್.  ಈ ದಂಗೆಯು ವಿಫಲವಾಯಿತು ಇದಕ್ಕೆ ಮುಖ್ಯ ಕಾರಣಗಳು ಭಾರತದವರೇ ಆದ ಅನೇಕ ರಾಜರುಗಳು ಬ್ರಿಟೀಷರಿಗೆ ಸಹಾಯಮಾಡಿ ದಂಗೆ ಹತ್ತಿಕ್ಕಲು ಕಾರಣರಾದರು,  ದಂಗೆಕಾರರಲ್ಲಿ ಸರಿಯಾದ ಸುಧಾರಿತ ಆಯುಧಗಳಿರಲಿಲ್ಲ, ಸರಿಯಾದ ನಾಯಕತ್ವದ ಕೊರತೆ, ದಂಗೆಕಾರರಲ್ಲಿ ಸಂವಹನದ ಕೊರತೆ ಮುಂತಾದವು.  ಈ ದಂಗೆಯ ಕಾರಣದಿಂದ ಭಾರತದ ಒಕ್ಕೂಟ ಮೂಡಲು ಸಹಾಯವಾಯಿತು ಮತ್ತು 1858ರಲ್ಲಿ ಬ್ರಿಟೀಷರಿಂದ ಗೌರ್ನಮೆಂಟ್ ಆಫ್ ಇಂಡಿಯಾ ಕಾಯ್ದೆ ಜಾರಿಯಾಯಿತು.

ಸಾಮಾನ್ಯ ಜ್ಞಾನ(General Knowledge): 


1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.

2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ:
* ಜೈಸಲ್ಮೇರ್

3) "Kurukshetra to Kargil " ಎಂಬ ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.

 4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.

5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ:
* ಮಂಚು.

6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ ಮಹಿಳೆ:
* ಅರುನಿಮಾ ಸಿನ್ಹಾ.

7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ ಸಂಬಂಧಿಸಿದೆ ?
* ಮೂತ್ರ ಕೋಶ.

8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.

 9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
* ಮ್ಯಾಂಗನೀಸ್.

10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.

11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.

12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ ಪದ್ಧತಿಗೆ ಪ್ರಸಿದ್ಧವಾಗಿದೆ?
★ ಮಣಿಪುರಿ.

13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ.?
★ 100 cm.

14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ?
★ ಸೋಡಿಯಂ ಕ್ಲೋರೈಡ್.

15) " ದಿವಾನ್ -ಈ -ಬಂದಗನ್ " ಅಥವಾ ಗುಲಾಮರ ಆಡಳಿತ ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.

16) 'ದಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.

17) ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ ಸ್ಥಳ?
★ ಕೈತಾಲ್.

18) 'ನಡೆದಾಡುವ ಕೋಶ' ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.

19) ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ ಎಲ್ಲಿದೆ?
★ ಧಾರವಾಡ.

20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
 ★ ದ್ವಿ-ಪೀನ.

21) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.

22) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).

23) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ ಅತೀ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ?
★ ಬ್ರಾಡ್ ಹಾಡ್ಜ್.

24) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ ಸಂವಿಧಾನ ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.

 25) ಅಗಸ್ಟ್ 9,1942 ರಂದು Quit India Movement ಗೆ ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.

26) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
★ ಅನಿಬೆಸಂಟ್.

 27) ' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು?
★ ಅಬ್ದುಲ್ ಕಲಾಂ ಆಜಾದ್.

28) 'ಗದ್ದರ ಪಕ್ಷ' ಎಂಬ ಕ್ರಾಂತಿಕಾರಿ ರಾಷ್ಟೀಯ ಸಂಘಟನೆಯ ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.

29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆಶ್ರಮದ ಹೆಸರು?
★ ಫಿನಿಕ್.

30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.

31) ಭಾರತ ಸಂವಿಧಾನದ ಯಾವ ವಿಧಿಯನ್ನು'ಸಂವಿಧಾನದ ಆತ್ಮ ಮತ್ತೂ ಹೃದಯ' ಎಂದು ಕರೆಯುತ್ತಾರೆ? .
★ 32ನೇ ವಿಧಿ.

32) ಯಾವ ತಿದ್ದುಪಡಿಯನ್ನು 'ಪುಟ್ಟ ಸಂವಿಧಾನ ' ಎಂದು ಕರೆಯಲಾಗುತ್ತದೆ? .
★ 42ನೇ ವಿಧಿ.

33) ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ ತಿದ್ದುಪಡಿ? .
★ 61ನೇ ತಿದ್ದುಪಡಿ.

34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .

 35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.

36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? .
★ ಸಿಕಂದರಾಬಾದ್.

37) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.

38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣರಾದ ಗವರ್ನರ್ ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.

39) ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ ಸಂಖ್ಯೆ?
★ 1.

 40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?

★ ಸಲ್ಪೂರಿಕ್ ಆಸಿಡ್.
41) ಮಾಲ್ಡೀವ್ಸ್ ದೇಶದ 6ನೇ ಅಧ್ಯಕ್ಷನಾಗಿ ಪ್ರಮಾಣವಚನ ಸ್ವೀಕರಿಸಿದವರು?
 ★ ಅಬ್ದುಲ್ಲಾ ಯಮೀನ್.

 42) 2013 ನೇ ಸಾಲಿನ ಅಂತರಾಷ್ಟ್ರೀಯ ' ಇಂದಿರಾಗಾಂಧಿ ಶಾಂತಿ, ನಿಶ್ಯಸ್ತ್ರೀಕರಣ, ಅಭಿವೃದ್ಧಿ ' ಪ್ರಶಸ್ತಿ ಪಡೆದವರು?
★ ಏಂಜೆಲಿನಾ ಮಾರ್ಕೆಲ್.

 43) ಮೂಲತಃ ಭಾರತೀಯ ಉಪಖಂಡವು ಯಾವ ಅತೀ ದೊಡ್ಡ ಜಡತ್ವ ಪರಿಮಾಣದ ಭಾಗವಾಗಿದೆ?
★ ಗೊಂಡವಾನಾ ಖಂಡ.

44) ' ವಿಶ್ವದ ಕಾಫಿ ಬಂದರು ' ?
★ ಸ್ಯಾಂಟೋಸ್.

45) ಜಲಾಂತರ್ಗಾಮಿ ಹಡಗಿನ ನಾವಿಕರು ಸಮುದ್ರದ ಮೇಲ್ಮೈ ವಸ್ತುಗಳನ್ನು ನೋಡಲು ಬಳಸುವ ಉಪಕರಣ?
★ ಪೆರಿಸ್ಕೋಪ್.

46) ಮೋಟಾರ್ ಕಾರ್ ಚಾಲಕನ ಸುರಕ್ಷತೆಗಾಗಿ ಉಪಯೋಗಿಸುವ ವಾಯುಚೀಲದಲ್ಲಿ ತುಂಬಿರುವ ಅನೀಲ?
★ ಸೋಡಿಯಂ ಅಝೈಡ್.

47) ಭಾರತರತ್ನ ಪುರಸ್ಕೃತ ಪ್ರೊ. ರಾವ್ ರವರು ಯಾವ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ?
★ ಘನಸ್ಥಿತಿ ಮತ್ತು Material Chemistry

48) ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು?
★ ಸಚಿನ್ ತೆಂಡೂಲ್ಕರ್.

49) ಜಗತ್ತಿನ ಮೊಟ್ಟ ಮೊದಲ ಮುದ್ರಿತ ಪುಸ್ತಕ?
★ ವಜ್ರ ಸೂತ್ರ.

 50) ಬಿಳಿ ಮತ್ತೂ ನೀಲಿ ನೈಲ್ ನದಿಗಳ ಸಂಗಮವಾಗುವ ಸ್ಥಳ?
★ ಸುಡಾನಿನ ಬಾರ್ಮೋಮ್.

51) ಭಾರತ ಸೇವಾದಳವು ಹೊರಡಿಸುತ್ತಿದ್ದ ಪತ್ರಿಕೆ ಯಾವುದು?
★ ಸ್ವಯಂ ಸೇವಕ.

52) ರಾಜೇಂದ್ರ ಪ್ರಸಾದ್ ರವರ ಸಮಾಧಿ ಸ್ಥಳದ ಹೆಸರು?
★ ಮಹಾ ಪ್ರಮಾಣ್ ಘಾಟ್.

 53) ಪ್ರತೀದಿನ ಒಂದು ಮಗುವನ್ನು ರಕ್ಷಿಸುವ ಕುರಿತು SACH(Save A Child's Heart) ಯೋಜನೆ ಮೊದಲಿಗೆ ಆರಂಭಗೊಂಡಿದ್ದು ಯಾವ ರಾಜ್ಯದಲ್ಲಿ?
★ ತಮಿಳುನಾಡು.

 54) ವಿಶ್ವದ ಅತೀ ದೊಡ್ಡ ಕಡಲು ದಂಡೆ ಹೊಂದಿರುವ ದೇಶ?
★ ಜಪಾನ್.

55) ಶ್ರೀಲಂಕಾದ ಅತೀ ಎತ್ತರದ ಶಿಖರ?
★ ಪಿದುರು ತುಲಗಲ (2,499 ಮೀ)

 56) ಯಾವ ವ್ಯಕ್ತಿಯ ವರದಿಯನ್ನು ' ಸಂವಿಧಾನದ ನೀಲಿ ನಕಾಶೆ ' ಎನ್ನುವರು?
★ ಮೊತಿಲಾಲ್ ನೆಹರು (1922)

57) ವಿಶ್ವದ ಅತ್ಯಂತ ಎತ್ತರದ ಕ್ರಿಕೇಟ್ ಮೈದಾನ ಎಲ್ಲಿದೆ?
 ★ ಬೇಲ್.

 58) ವಿಶ್ವದಲ್ಲೇ ಮೊದಲಬಾರಿಗೆ ಸಾಹಿತ್ಯಕ್ಕೆ ನೋಬೆಲ್ ಪ್ರಶಸ್ತಿ ಪಡೆದ ಮಹಿಳೆ?
★ ಪರ್ಲ್ ಬಕ್.

 59) ಮಹಾಭಾರತವನ್ನು ಬಂಗಾಳಿಗೆ ಅನುವಾದಿಸಿದ ಮುಸಲ್ಮಾನ ದೊರೆ?
★ ಮೀರ್ ಜಾಫರ್.

 60) ' ವಿಶ್ವದ ವಾಹನಗಳ ತಯಾರಿಕಾ ರಾಜಧಾನಿ '(Automobile Capital of the World) ಯಾವುದು?
 ★ ಡೆಟ್ರಾಯಿಡ್.

61) ' ನ್ಯೂ ಮೂರ್ ಐಲೆಂಡ್ ' ಇದು ಈ ಎರಡು ದೇಶಗಳ ನಡುವಿನ ವಿವಾದಾತ್ಮಕ ವಿಷಯ:
★ ಭಾರತ - ಬಾಂಗ್ಲಾ ದೇಶ.

62) ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ?
★ ನ್ಯೂಜಿಲೆಂಡ್.

63) ಅತ್ಯಂತ ಹಗುರವಾದ ಲೋಹ?
★ ಲೀ.

64) ಏಷ್ಯಾದಲ್ಲೇ ಅತ್ಯಂತ ಹಳೆಯ ಷೇರು ಮಾರುಕಟ್ಟೆ?
★ ಮುಂಬೈ MSE (Mumbai Stock Exchange)

65) ಭಾರತದ ಅತೀ ದೊಡ್ಡ (SEZ-special Economic Zone) ವಿಶೇಷ ವಿತ್ತ ವಲಯ ?
★ ಉತ್ತರ ಪ್ರದೇಶದ ನೊಯಿಡಾ.

66) ಕನ್ನಡದ ಮೂರು ಪ್ರಮುಖ ಗದ್ಯ ಕೃತಿಗಳು:
★ ೧) ಮುದ್ರಾಮಂಜೂಷ (ರಚಿಸಿದವರು - ಕೆಂಪು ನಾರಾಯಣ) .
೨) ಚಾವುಂಡರಾಯ ಪುರಾಣ (ರಚಿಸಿದವರು -ಚಾವುಂಡರಾಯ) .
೩) ವಡ್ಡಾರಾಧನೆ (ರಚಿಸಿದವರು -ಶಿವಕೋಟಾಚಾರ್ಯ).

67) ಕೃತಕ ಮಳೆ ಉಂಟಾಗುವಂತೆ ಮಾಡಲು ಬಳಸುವ ರಾಸಾಯನಿಕ ವಸ್ತು?
★ ಸಿಲ್ವರ್ ಅಯೋಡೈಡ್.

 68) ಗೌತಮ ಬುದ್ಧ ನ ಬಗ್ಗೆ ಭವಿಷ್ಯ ನುಡಿದ ಗುರುವಿನ ಹೆಸರು?
 ★ ಅಸ್ಸಿಮಾ.

 69) ಗೌತಮ ಬುದ್ಧನ ಹಿಂದಿನ ಜೀವನ ಚರಿತ್ರೆಗಳನ್ನು ತಿಳಿಸುವ ಕೃತಿ?
★ ಜಾತಕಗಳು.

70) ಗೊಹ್ಲಾ ರಾಷ್ಟ್ರೀಯ ಉದ್ಯಾನ ಎಲ್ಲಿದೆ?
★ ಹಿಮಾಚಲ ಪ್ರದೇಶದ ಕುಲು ದಲ್ಲಿದೆ.

 72) ಭೂಗೋಳದ ಮೇಲೆ ಕಾಲ್ಪನಿಕವಾಗಿ ಎಳೆಯಲಾಗಿರುವ ರೇಖಾಂಶಗಳ ಸಂಖ್ಯೆ ಎಷ್ಟು?
★ 360.

 73) ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಿಸುವ ಗ್ರಂಥಿ?
★ ಹೈಪೊಥಲಾಮಸ್.

 74) ಬೀಜಗಳ ಬಂಜೆತನವನ್ನು ನಿವಾರಿಸಲು ಬಳಸುವ ರಾಸಾಯನಿಕ?
★ ಜಿಬ್ಬರಲಿಕ್ ಆಮ್ಲ.

75) UIDAI ಇದರ ವಿಸ್ತೃತ ರೂಪ:

★ The Unique Identification Authority of India. (ಭಾರತದ ಗುರುತು ಪತ್ರ ನೀಡಿಕೆಯ ಪ್ರಾಧಿಕಾರ)

77) ಬೆಂಕಿ ಆರಿಸುವ ಯಂತ್ರಗಳಲ್ಲಿ ಉಪಯೋಗಿಸುವ ಅನಿಲ:

★ ಕಾರ್ಬನ್ ಡೈ ಆಕ್ಸೈಡ್.

 78) ಆಸ್ಪತ್ರೆಗಳಲ್ಲಿ ಬಳಸುವ ಆಕ್ಸಿಜನ್ ಸಿಲಿಂಡರ್ ಗಳಲ್ಲಿ ಇರುವ ಅನಿಲಗಳೆಂದರೆ ' ಆಕ್ಸಿಜನ್ ಮತ್ತು: 
★ ಹೀಲಿಯಂ.

79) ಆರ್ಕಿಟಿಕ್ ಪ್ರಾಂತ್ಯಕ್ಕೆ ಹೋದ ಪ್ರಥಮ ಭಾರತ ತಂಡದ ನೇತೃತ್ವ ವಹಿಸಿದ್ದ ವಿಜ್ಞಾನಿ ?
★ ರಸಿಕ್ ರವೀಂದ್ರ.

80) ' ಹೈಡ್ ಕಾಯಿದೆ ' ಯಾವುದಕ್ಕೆ ಸಂಬಂಧಿಸಿದ್ದು?
★ ಭಾರತ- ಅಮೇರಿಕ ಪೌರ ಅಣು ಸಹಕಾರಕ್ಕೆ ಸಂಬಂಧಿಸಿದ್ದು.

81) ' ಅಥ್ಲಿಟ್ ಫೂಟ್ ' ಎಂಬ ರೋಗ ಯಾವುದರಿಂದ ಹರಡುತ್ತದೆ?
★ ಫಂಗಸ್.

82) ಯಾವ ನದಿ 3 ಮಾರ್ಗಗಳಲ್ಲಿ ಬೇರ್ಪಟ್ಟು ಮತ್ತೇ ಸ್ವಲ್ಪ ದೂರ ಕ್ರಮಿಸಿದ ನಂತರ ಬೆರೆಯುವುದರೊಂದಿಗೆ ಶ್ರೀರಂಗಪಟ್ಟಣ, ಶಿವನ ಸಮುದ್ರ ದ್ವೀಪಗಳೇರ್ಪಟ್ಟವು?
 ★ ಕಾವೇರಿ ನದಿ.

 83) ದೆಹಲಿಯನ್ನಾಳಿದ 8 ಮಂದಿ ಸುಲ್ತಾನರ ಆಳ್ವಿಕೆಯನ್ನು ನೋಡಿದನು ಯಾರು?
★ ಅಮೀರ್ ಖುಸ್ರೋ.

 84) ಭಾರತವನ್ನು ವಿಭಜಿಸಿದಾಗ ಭಾರತೀಯ ರಾಷ್ಟೀಯ ಕಾಂಗ್ರೆಸ್ ಗೆ ಅಧ್ಯಕ್ಷರಾಗಿದ್ದವರು ಯಾರು?
★ ಜೆ.ಬಿ. ಕೃಪಲಾನಿ.

85) ಭಗವದ್ಗೀತೆಯನ್ನು ಮೊಟ್ಟ ಮೊದಲ ಬಾರಿಗೆ ಆಂಗ್ಲ ಭಾಷೆಗೆ ಅನುವಾದ ಮಾಡಿದವರು?
 ★ ಚಾರ್ಲ್ಸ್ ವಿಲ್ಕಿನ್.

 86) ದೇಶದೊಳಗಿನ ಅತಿ ಕಡಿಮೆ ಯೆರೈನ್ ಪಾರ್ಕ್ ಗಳ ಪೈಕಿ ಒಂದಾದ ' ಭಿತರ್ ಕನಿಕಾ ರಾಷ್ಟೀಯ ಉದ್ಯಾನವನ ' ಯಾವ ರಾಜ್ಯದಲ್ಲಿದೆ?
★ ಓರಿಸ್ಸಾ.

87) ' ಅರಕನ್ ಯೋಮ ' ಎಂಬುದು ಹಿಮಾಲಯಗಳ ಮುಂದುವರಿದ ಭಾಗ, ಇದು ಎಲ್ಲಿದೆ?

★ ಮಯನ್ಮಾರ್.


SRC TEAM, BELLARY.

No comments:

Post a Comment

Thanking You For Your Valuable Comment. Keep Smile