Friday, 3 October 2014

ಸಂದರ್ಶನ

              ಉದ್ಯೋಗಾಕಾಂಕ್ಷಿಗಳ ಜೀವನದಲ್ಲಿ ಸಂದರ್ಶನ ಬಹು ಮುಖ್ಯವಾದ ಅಂಶ. ಸಂದರ್ಶನದಲ್ಲಿ ಸಂದರ್ಶಕರ ಪ್ರಶ್ನೆಗೆ

ಜಾಣ್ಮೆಯಿಂದ ಉತ್ತರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ದೇಹಭಾಷೆ. ಇಂತಹ ವೇಳೆ ದೇಹಭಾಷೆಯನ್ನು

ಸರಿಯಾದ ರೀತಿಯಲ್ಲಿ ಬಳಸಿದರೆ ಭವಿಷ್ಯ ಉಜ್ವಲವಾಗುತ್ತದೆ. ಸಂದರ್ಶನದ ವೇಳೆ ನಿಮಗೇನು ಬೇಕೆಂದು, ನಿಮ್ಮಲ್ಲಿನ ಜಾಣೆ

 ಎಂತಹದೆಂದು, ನೀವೆಷ್ಟು ಕ್ರಿಯಾಶೀಲರು, ಸೃಜನಶೀಲರು ಎಂಬುದನ್ನು ನಿಮ್ಮ ಮಾತುಗಳಲ್ಲಿ ತಿಳಿಸಬಹುದು. ಆದರೆ ನಿಮ್ಮ

ದೇಹಭಾಷೆ ಇದಕ್ಕೆ ವಿರುದ್ದವಾಗಿದ್ದರೆ ಸಂದರ್ಶನ ವಿಫಲವಾಗುತ್ತದೆ. ದೇಹಭಾಷೆ ನಿಖರವಾಗಿಲ್ಲದಿದ್ದರೆ ನೀವೊಬ್ಬ

ವಿಶ್ವಾಸಾರ್ಹತೆಯಿಲ್ಲದ, ಅಭದ್ರತೆಯುಳ್ಳ ದುರಹಂಕಾರಿ ಎಂಬುದನ್ನು ತೋರಿಸಿದಂತಾಗುತ್ತದೆ. ಯಾವ ಸಂದರ್ಶಕರ

ತೀರ್ಮಾನಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದೋ ಗೊತ್ತಿಲ್ಲ. ಆದ್ದರಿಂದ ಸಂದರ್ಶನದ ದೇಹಭಾಷೆ ಹೀಗಿರಲಿ.

ಹಸ್ತಲಾಘವ : ಸಂದರ್ಶನದ ಕೊಠಡಿಯೊಳಗೆ ಪ್ರವೇಶಿಸಿದ ಕೂಡಲೇ ಅಲ್ಲಿನ ಸಂದರ್ಶಕರು ಕೈಕುಕಲು

ಮುಂದಾಗುವುದಕ್ಕಿಂತ ಮೊದಲು ನೀವು ಕೈಕುಲುಕಿ. ಇದು ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಮತ್ತು ಸಂದರ್ಶನಕ್ಕೆ ನೀವು

ಸಿದ್ದರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ.

     ಹೀಗೆ ಕೈಕುಲುಕುವಾಗ ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳ ನಡುವೆ 45 ಡಿಗ್ರಿ ಅಂತರ ಇರಲಿ. ನಿಮ್ಮ ಹೆಬ್ಬೆರಳು

 ಮತ್ತು ತೋರುಬೆರಳಿನ ನಡುವಿನ ಚರ್ಮ ಕೈಕುಲುಕುವವರ ಕೈಗಳನ್ನು ಸ್ಪರ್ಶಿಸಲಿ. ಎಲ್ಲಾ ಬೆರಳುಗಳಿಂದ ಅವರ ಕೈಯನ್ನು

ಮುಚ್ಚಿ ಗಟ್ಟಿಯಾಗಿ ಹಿಡಿಯಿರಿ.

      ಹಗುರವಾದ ಕೈಕುಲುವಿಕೆಯನ್ನು ತಪ್ಪಿಸಿ. ಹಗುರವಾದ ಕೈಕುಲುಕುವಿಕೆಯಿಂದ ನೀವು ಅಧೀರರು, ಅನಿಶ್ಚಿತತೆ

ಅನುಭವಿಸುವವರು ಎಂಬುದನ್ನು ತೋರಿಸುತ್ತದೆ. ಅಂತೆಯೇ ಎರಡೂ ಕೈಗಳಿಂದ ಕೈಕುಲುಕಬೇಡಿ. ಅದು ನೀವು ತುಂಬಾ

ಪ್ರಬಲರು ಅಥವಾ ಅಭದ್ರತೆ ಸರಿದೂಗಿಸಲು ಪ್ರಯತ್ನಿಸುವವರು ಎಂಬುದನ್ನು ಸಾಬೀತುಪಡಿಸಿದಂತಾಗುತ್ತದೆ.

ಬೆವರನ್ನು ತಪ್ಪಿಸಿ : ನೀವು ಹೆಚ್ಚಾಗಿ ಬೆವರುತ್ತೀರಾ? ಹಾಗಿದ್ದರೆ ಸಂದರ್ಶನ ಕೊಠಡಿ ತಲುಪುವುದಕ್ಕಿಂತ ಮೊದಲು ಮುಖ

ತೊಳೆದುಕೊಂಡು ರಿಫ್ರೆಶ್ ಆಗಿ. ಕರವಸ್ತ್ರದಿಂದ ಕೈಗಳನ್ನು ಒಣಗಿಸಿಕೊಳ್ಳಿ.  ಸಂದರ್ಶನ ಕೊಠಡಿಯಲ್ಲಿ ಹಣೆ ಮತ್ತು ಕೈಗಳಲ್ಲಿನ

ಬೆವರನ್ನು ಕೈಗಳಿಂದ ಒರೆಸಬೇಡಿ. ಕರವಸ್ತ್ರ ಬಳಸಿ. ಹಸ್ತಲಾಘವ ನೀಡುವಾಗ ನಿಮ್ಮ ಕೈಗಳು ಒದ್ದೆಯಾಗಿದ್ದರೆ ನೀವು

ಅಧೀರರು, ಅನಿಶ್ಚಿತರು, ನರದೌರ್ಬಲ್ಯದಿಂದ ಬಳಲುವವರು ಎಂಬುದು ತಿಳಿಯುತ್ತದೆ.

ಕಣ್ಣುಗಳ ಸಂಪರ್ಕವಿರಲಿ : ಸಂದರ್ಶಕರೊಂದಿಗೆ ಸಂಭಾಷಣೆ ನಡೆಸುವಾಗ ನಿರಂತರವಾಗಿ ಕಣ್ಣುಗಳ ಸಂಪರ್ಕವಿರಲಿ.

ಸಂಭಾಷಣೆ ವೇಳೆ ಅತ್ತಿತ್ತ ನೋಡುತ್ತಿದ್ದರೆ ನೀವು ಅಸುರಕ್ಷಿತರು, ಅಪ್ರಾಮಾಣಿಕರು, ಅಸಡ್ಡೆಯುಳ್ಳವರು ಎಂಬುದು

ತಿಳಿಯುತ್ತದೆ. ಸಂದರ್ಶಕರು ಏಕಕಾಲದಲ್ಲಿ ನಿಮ್ಮೊಂದಿಗೆ ಸಂಭಾಷಿಸುತ್ತಾರೆ. ಅಂತಹ ವೇಳೆ ಎಲ್ಲರೊಂದಿಗೂ ನೇರ

ನೋಟದೊಂದಿಗೆ ಮಾತನಾಡಿ. ಪ್ರತಿಯೊಬ್ಬ ಸಂದರ್ಶಕರನ್ನು ಸಮಭಾವದಿಂದ ಗೌರವಿಸಿ. ಪ್ರಶ್ನೆಗೆ ಉತ್ತರಿಸುವಾಗ

ದೃಷ್ಟಿಯನ್ನು ದೂರ ಹಾಯಿಸಬೇಡಿ ಅಥವಾ ಕೆಳಗೆ ನೋಡಬೇಡಿ. ಪ್ರಶ್ನೆ ಕೇಳಿದವರ ಕಡೆ ನೋಟ ಹರಿಸಿ ಉತ್ತರಿಸಿ. ಕಣ್ಣುಗಳ

ಸಂಪರ್ಕದೊಂದಿಗೆ ಮಾತನಾಡುವುದರಿಂದ ನೀವು ಪ್ರಾಮಾಣಿಕರು ಹಾಗೂ ವೃತ್ತಿಯನ್ನು ಹೆಚ್ಚು ಪ್ರೀತಿಸುವವರು ಎಂಬುದು

ತಿಳಿಯುತ್ತದೆ.

ನೇರವಾಗಿ ಕುಳಿತುಕೊಳ್ಳಿ : ನಿಮಗೆ ಮೀಸಲಾದ ಆಸನದಲ್ಲಿನ ಬೆನ್ನಾಸರೆಗೆ ಒರಗಿ ನೇರವಾಗಿ ಸ್ಥಿರವಾಗಿ ಕುಳಿತುಕೊಳ್ಳಿ.

 ಹಗುರವಾಗಿ ಅಥವಾ ಒಂದುಕಡೆ ವಾಲಿದಂತೆ ಕುಳಿತರೆ ಅದು ನಿಮ್ಮ ಅಸ್ಥಿರತೆಯನ್ನು ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ.

ನಿಮ್ಮ ಭುಜಗಳನ್ನು ಸಾಮಾನ್ಯ ಮಟ್ಟಕ್ಕಿಂತ ಕೆಳಗಿರಲಿ. ಅಂತೆಯೇ ಸಂದರ್ಶಕರ ಸ್ಥಳವನ್ನು ಗೌರವಿಸಿ.

ಸ್ಥಿರವಾಗಿರಿ: ಕುಳಿತುಕೊಂಡಾಗ ನಿಮ್ಮ ಕಾಲುಗಳನ್ನು ಅಲುಗಾಡಿಸದೇ ಸ್ಥಿರವಾಗಿ ಕುಳಿತುಕೊಳ್ಳಿ. ಮಾತಿನ ಚಲನೆ ಹಾಗೂ

ಔಪಚಾರಿಕ ಭಂಗಿಯ ನಡುವೆ ಸಮತೋಲನ ಇರಲಿ. ಅನಾವಶ್ಯಕವಾಗಿ ಕೈಗಳನ್ನು ಚಲಿಸುವುದು ಅಥವಾ ಚಲಿಸದೇ

ಇರುವುದು ಸರಿಯಲ್ಲ. ಇದು ವ್ಯಕ್ತಿ ಗೊಂದಲದಲ್ಲಿದ್ದಾನೆ ಎಂಬುದನ್ನು ಹೇಳುತ್ತದೆ. ಆದ್ದರಿಂದ ಮಾತಿನ ಲಯಕ್ಕೆ ತಕ್ಕಂತೆ

ಕೈಗಳ ಚಲನೆ ಇರಲಿ.

ನಿರಾಳವಾಗಿರಿ : ನಿಮ್ಮ ಮಾತುಗಳು ಸಹಜವಾಗಿರಲಿ, ಹಿತ ಮಿತವಾಗಿರಲಿ. ಹೆಚ್ಚು ಆವೇಶಭರಿತರಾಗಬೇಡಿ. ಮಾನಸಿಕ

ಒತ್ತಡವನ್ನು ಸಮ ಮಟ್ಟದಲ್ಲಿ ಕಾಯ್ದುಕೊಳ್ಳಿ. ಅತೀಯಾದ ಒತ್ತಡ ಪ್ರದರ್ಶಿಸಬೇಡಿ. ಇದರಿಂದ ನೀವು ಉದಾಸೀನರೆಂಬುದು

ತಿಳಿಯುತ್ತದೆ.

ಒಪ್ಪಿಗೆಗೆ ಮಾತ್ರ ತಲೆದೂಗಿ : ಸಂದರ್ಶಕರು ಏನು ಹೇಳುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳದೇ ಅನಾವಶ್ಯಕವಾಗಿ

ತಲೆದೂಗಬೇಡಿ. ಅನಾವಶ್ಯಕವಾಗಿ ತಲೆದೂಗುವುದು ಅವಿಧೇಯತೆ ಮತ್ತು ಅಪ್ರಾಮಾಣಿಕತೆಯ ಸಂಕೇತ.

ಪ್ರಮುಖಾಂಶಗಳನ್ನು ಅರ್ಥಮಾಡಿಕೊಂಡಾಗ ಮತ್ತು ಅವರ ಹೇಳಿಕೆಯನ್ನು ಒಪ್ಪಿಕೊಂಡಾಗ ಮಾತ್ರ ತಲೆದೂಗಿ.

ಕೈಗಳನ್ನು ಕಟ್ಟಬೇಡಿ : ಸಂದರ್ಶಕರ ಎದುರು ಕೈಕಟ್ಟಿ ಕೂರಬೇಡಿ. ಕೈಕಟ್ಟುವುದು ನಿಮ್ಮಲ್ಲಿನ ವಿಶ್ವಾರ್ಹತೆ ಮತ್ತು ಆಸಕ್ತಿಯ

ಕೊರತೆಯನ್ನು ಎತ್ತಿ ತೋರುತ್ತದೆ. ಕೈಗಳು ನಿಮ್ಮ ತೊಡೆಯ ಮೇಲಿರಲಿ ಅಥವಾ ಟೇಬಲ್ ಮೇಲಿರಲಿ. ಇದು ಸಂಭಾಷಣೆಗೆ

ಮುಕ್ತವಾಗಿ ಕೈಗಳನ್ನು ಚಲಿಸಲು ಸಹಾಯಕವಾಗುತ್ತದೆ. ಹಾಗೂ ಇತರರ ಮಾತುಗಳನ್ನು ಆಸಕ್ತಿಯಿಂದ ಕೇಳುತ್ತೀರಿ

ಎಂಬುದನ್ನು ತಿಳಿಸುತ್ತದೆ.

ಬೆರಳುಗಳನ್ನು ಹಿಸುಕಬೇಡಿ : ಸಂದರ್ಶಕರ ಎದುರು ಪದೇ ಪದೇ ಬೆರಳುಗಳನ್ನು ಹಿಸುಕಬೇಡಿ. ಇದು ನಿಮ್ಮಲ್ಲಿನ ಅಸ್ಥಿರತೆ

 ಹಾಗೂ ಅಸ್ಪಷ್ಟತೆಯ ಸಂಕೇತ. ಬೆರಳುಗಳಿಂದ ಮೇಜಿನ ಮೇಲೆ ಕುಟ್ಟಬೇಡಿ, ಲಯಬದ್ದ ಚಲನೆಯನ್ನು ಮಾಡಬೇಡಿ. ಇದು

ಸಂದರ್ಶಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಒಟ್ಟಾರೆ ಬೆರಳುಗಳಿಂದ ಯಾವುದೇ ರೀತಿಯ ಶಬ್ದ ಉಂಟಾಗದಂತೆ

ಎಚ್ಚರವಹಿಸಿ.

ಅನಪೇಕ್ಷಿತ ಶಬ್ದ ಬೇಡ : ಕೆಲವರು ಮಾತನಾಡುವಾಗ ಗಂಟಲು, ನಾಲಿಗೆ, ತುಟಿ, ಮೂಗುಗಳಿಂದ ವಿಚಿತ್ರ ಶಬ್ದ

ಹೊರಡಿಸುತ್ತಾರೆ. ಇದು ನೋಡುಗರಿಗೆ ಕೇಳುಗರಿಗೆ ಅಸಹ್ಯವನ್ನುಂಟು ಮಾಡುತ್ತದೆ. ಆದ್ದರಿಂದ ಮಾತನಾಡುವಾಗ ವಿಚಿತ್ರ

ಶಬ್ದಗಳನ್ನು ಹೊರಡಿಸಬೇಡಿ. ಸ್ವಾಭಾವಿಕವಾಗಿ ಮಾತನಾಡಿ. ಪದೇ ಪದೇ ಗಲ್ಲ, ತುಟಿ, ಕೆನ್ನೆ, ಮೂಗು, ಕಿವಿಗಳನ್ನು

ಕೆರೆಯುವುದು, ಕಣ್ಣೊರೆಸಿಕೊಳ್ಳುವುದು ಮಾಡಬೇಡಿ. ಇದು ನಿಮ್ಮ ಅವಿಶ್ವಾಸವನ್ನು ವೃತ್ತಿಯಲ್ಲಿನ ನಿರಾಸಕ್ತಿಯನ್ನು

ಸೂಚಿಸುತ್ತದೆ.

       ಮೇಲಿನ ಅಂಶಗಳನ್ನು ಪಾಲಿಸಿ ನಿಮ್ಮದೇ ಅದ ದೇಹಭಾಷೆ ಬೆಳೆಸಿಕೊಂಡರೆ ನೀವೊಬ್ಬ ಅತ್ಯುತ್ತಮ ಅಭ್ಯರ್ಥಿ

ಎಂಬುದನ್ನು ಸಾಬೀತುಪಡಿಸಬಹುದು ಜೊತೆಗೆ ವೃತ್ತಿಯಲ್ಲಿ ಯಶಸ್ಸು ಗಳಿಸಬಹುದು.

Friday, 25 July 2014

ಮೊಬೈಲ್ ಮೆಸೇಜಿಂಗ್ ಸರ್ವೀಸ್ ವಾಟ್ಸ್‌ಆಪ್ ಅನ್ನು ಖರೀದಿಸಿದ ಫೇಸ್‌ಬುಕ್

ಮೊಬೈಲ್ ಮೆಸೇಜಿಂಗ್ ಸರ್ವೀಸ್ ವಾಟ್ಸ್‌ಆಪ್ ಅನ್ನು ಖರೀದಿಸಿದ 

ಫೇಸ್‌ಬುಕ್

ಮೊಬೈಲ್ ತಂತ್ರಜ್ಞಾನದ ಇತಿಹಾಸದಲ್ಲೇ ಅತಿದೊಡ್ಡ ಡೀಲ್ ನಡೆದಿದೆ. ಜನಪ್ರಿಯ ಮೊಬೈಲ್ ಮೆಸೇಜಿಂಗ್ ಸರ್ವೀಸ್ 

ಆಗಿರುವ ವಾಟ್ಸ್‌ಆಪ್ ಅನ್ನು ಬರೋಬ್ಬರಿ 12 ಲಕ್ಷ ಸಾವಿರ ಕೋಟಿಗೆ ಫೇಸ್‌ಬುಕ್ ಖರೀದಿಸಿದೆ.

ಯಾಕೆ ಡೀಲ್?

ಸಾಮಾಜಿಕ ತಾಣಗಳಲ್ಲಿ ಜನಪ್ರಿಯತೆ ಗಳಿಸಿರುವ ಫೇಸ್‌ಬುಕ್‌ಗೆ ಮೊಬೈಲ್ ಸಂವಹನದಲ್ಲೂ ಪಾರುಪತ್ಯ

 ಗಳಿಸಬೇಕೆಂಬ ಧ್ಯೇಯವಿತ್ತು. ಅದರ ಪರಿಣಾಮವೇ ಫೇಸ್‌ಬುಕ್-ವಾಟ್ಸ್‌ಆಪ್ ಡೀಲ್. ಈ ಬೃಹತ್ ಒಪ್ಪಂದದ 

ಮೂಲಕ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಮೊಬೈಲ್ ಸಂವಹನ ಲೋಕಕ್ಕೆ ಕಾಲಿಟ್ಟಿದ್ದಾರೆ. 

ವಿಶೇಷವಾಗಿ ಯುವಜನರ ಮನಸ್ಸಿನಲ್ಲಿ ಸ್ಥಾನ ಪಡೆಯುವುದು ಹಾಗೂ ತನ್ನ ಜನಪ್ರಿಯತೆಯನ್ನು ಇನ್ನಷ್ಟು 

ಹೆಚ್ಚಿಸುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ.


ಒಪ್ಪಂದದಲ್ಲೇನಿದೆ?

ಒಟ್ಟು 19 ಶತಕೋಟಿ ಡಾಲರ್‌ಗೆ ವಾಟ್ಸ್‌ಆಪ್ ಅನ್ನು ಫೇಸ್‌ಬುಕ್ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ.

ಒಪ್ಪಂದದ ಪ್ರಕಾರ, ಫೇಸ್‌ಬುಕ್ ಮೊದಲು 4 ಶತಕೋಟಿ ಡಾಲರ್ ಅನ್ನು ನಗದು ರೂಪದಲ್ಲಿ ನೀಡಲಿದೆ. 

ನಂತರ ಫೇಸ್‌ಬುಕ್‌ನ ಷೇರುಗಳ ರೂಪದಲ್ಲಿ 12 ಶತಕೋಟಿ ಡಾಲರ್ ನೀಡಲಿದೆ. ಅಷ್ಟೇ ಅಲ್ಲದೆ, ವಾಟ್ಸ್‌ಆಪ್ 

ಸ್ಥಾಪಕರು ಮತ್ತು ನೌಕರರಿಗೆ 3 ಶತಕೋಟಿ ಡಾಲರ್ ಮೊತ್ತದ ನಿಯಂತ್ರಿತ ಷೇರುಗಳನ್ನು ಫೇಸ್‌ಬುಕ್ ಒದಗಿಸಲಿದೆ. 

ಒಪ್ಪಂದದಂತೆ, ವಾಟ್ಸ್‌ಆಪ್ ಸ್ಥಾಪಕ ಜಾನ್ ಕೌಮ್ ಫೇಸ್‌ಬುಕ್‌ನ ನಿರ್ದೇಶಕರ ಮಂಡಳಿಯಲ್ಲಿ ಸ್ಥಾನ ಪಡೆಯಲಿದ್ದಾರೆ.


ದೊಡ್ಡ ಡೀಲ್?

ವಾಟ್ಸ್‌ಆಪ್-ಫೇಸ್‌ಬುಕ್ ಡೀಲ್ 19 ಶತಕೋಟಿ ಡಾಲರ್(12 ಲಕ್ಷ ಸಾವಿರ ಕೋಟಿ). 2011ರಲ್ಲಿ 8.5 ಬಿಲಿಯನ್ 

ಡಾಲರ್(528 ಶತಕೋಟಿ ಡಾಲರ್)ಗೆ ಸ್ಕೈಪ್ ಅನ್ನು ಮೈಕ್ರೋಸಾಫ್ಟ್ ಖರೀದಿಸಿತ್ತು. ಮೋಟೊರೋಲಾ ಖರೀದಿ ವೇಳೆ 

ಲೆನೋವೋ 2.9 ಶತಕೋಟಿ ಡಾಲರ್ ಅನ್ನು ಗೂಗಲ್‌ಗೆ ನೀಡಿತ್ತು. ಇತ್ತೀಚೆಗಷ್ಟೇ ಫೇಸ್‌ಬುಕ್ 1 ಶತಕೋಟಿ ಡಾಲರ್‌ಗೆ

 ಇನ್‌ಸ್ಟಾಗ್ರಾಂ ಅನ್ನು ಸ್ವಾಧೀನಪಡಿಸಿಕೊಂಡಿತ್ತು. ಹಾಗಾಗಿ ಮೊಬೈಲ್ ಟೆಕ್ ವಲಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ

 ಮೊತ್ತಕ್ಕೆ ನಡೆದ ಒಪ್ಪಂದವೆಂದರೆ ವಾಟ್ಸ್‌ಆಪ್-ಫೇಸ್‌ಬುಕ್ ಡೀಲ್.


ವಾಟ್ಸ್‌ಆಪ್‌ ಇತಿಹಾಸ:

ವಾಟ್ಸ್‌ಆಪ್‌ನ ಸ್ಥಾಪಕ ಹಾಗೂ ಸಿಇಓ ಜಾನ್ ಕೌಮ್(37) ಮೂಲತಃ ಉಕ್ರೇನ್‌ನವರು. ಕಡು ಬಡ ಕುಟುಂಬವರಾಗಿದ್ದ

ಕೌಮ್ ಕುಟುಂಬ ಕ್ಯಾಲಿಫೋರ್ನಿಯಾಗೆ ವಲಸೆ ಬಂದಿತ್ತು. ಆಗ ಕೌಮ್‌ಗೆ 16 ವರ್ಷ. ಸರ್ಕಾರವು ಅತಿ ಬಡವರಿಗೆ ನೀಡುವ

 ಆಹಾರದ ಕೂಪನ್ ಮೂಲಕ ಆಹಾರ ಪಡೆದು ಕೌಮ್ ಕುಟುಂಬ ದಿನದೂಡುತ್ತಿತ್ತು. ಒಂದು ಕಾಲದಲ್ಲಿ ಅಂತಹ ದುರವಸ್ಥೆಯ

 ಬದುಕಿಗೆ ಸಾಕ್ಷಿಯಾಗಿದ್ದ ಕೌಮ್ ಈಗ ಕೋಟ್ಯಧಿಪತಿಯಾಗಿ ಬೆಳೆದಿದ್ದಾರೆ. ಬಿಲ್ ಗೇಟ್ಸ್, ಮಾರ್ಕ್ಝುಕರ್‌ಬರ್ಗ್‌ರಂತೆಯೇ

 ಕೌಮ್ ಕೂಡ ಅರ್ಧದಲ್ಲೇ ಕಾಲೇಜು ಬಿಟ್ಟವರು. ಬಾಗಿಲು ತಟ್ಟಿ ವಾಪಸಾಗಿದ್ದ ವಾಟ್ಸ್‌ಆಯಪ್‌ನ ಸಹಸ್ಥಾಪಕ ಬ್ರಿಯಾನ್

 ಆಯಕ್ಟನ್ 2009ರಲ್ಲಿ ಕೆಲಸಕ್ಕಾಗಿ ಸ್ವತಃ ಫೇಸ್‌ಬುಕ್ ಹಾಗೂ ಟ್ವಿಟರ್ ಕಚೇರಿಯ ಬಾಗಿಲು ತಟ್ಟಿದ್ದ. ಆದರೆ ಕೆಲಸ 

ಗಿಟ್ಟಿಸಿಕೊಳ್ಳುವಲ್ಲಿ ವಿಫಲನಾದ. ನಂತರ ವಾಟ್ಸ್‌ಆಯಪ್‌ನ ಸಹಸ್ಥಾಪಕನ ಹುದ್ದೆ ಬ್ರಿಯಾನ್‌ನ ಬದುಕಿಗ ಗತಿಯನ್ನೇ

 ಬದಲಾಯಿಸಿತು. ಅಂದು ಕೆಲಸೇ ನೀಡದೇ ವಾಪಸ್ ಕಳುಹಿಸಿದ್ದ ಅದೇ ಫೇಸ್‌ಬುಕ್ ಈಗ ಕೌಮ್- ಬ್ರಿಯಾನ್‌ರ 

ಕಂಪನಿಯನ್ನು ಖರೀದಿಸಿದೆ ಎನ್ನುವುದು ವಿಪರ್ಯಾಸ.


ಪರಿಣಾಮವೇನು?

ಈ ಡೀಲ್‌ನಿಂದಾಗಿ ವಾಟ್ಸ್‌ಆಯಪ್ ಬ್ರ್ಯಾಂಡ್ ಮೇಲೆ ಯಾವುದೇ ಪರಿಣಾಮ ಬೀರದು. ಈ ಬ್ರ್ಯಾಂಡ್ ಅನ್ನು ಇದೇ 

ರೀತಿ ಮುಂದುವರಿಸಿಕೊಂಡು ಹೋಗುವುದಾಗಿ ಝುಕರ್‌ಬರ್ಗ್ ಭರವಸೆ ನೀಡಿದ್ದಾರೆ. ಜತೆಗೆ ವಾಟ್ಸ್‌ಆಯಪ್‌ನ ಪ್ರಧಾನ 

ಕಚೇರಿಯೂ ಕ್ಯಾಲಿಫೋರ್ನಿಯಾದ ಮೌಂಟನ್ ವ್ಯೂವ್‌ನಲ್ಲೇ ಇರಲಿದೆ. ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. 

ಈಗ ಹೇಗೆ ಸೇವೆ ನೀಡುತ್ತದೆಯೋ ಅದೇ ರೀತಿ ಸೇವೆ ನೀಡಲಿದೆ. ಬಳಕೆದಾರರಿಗೆ ಈಗಿನಂತೆಯೇ ಜಾಹೀರಾತುಗಳ 

ಕಿರಿಕಿರಿಯೂ ಇರುವುದಿಲ್ಲ.

ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿ ಭಾರತೀಯ ಸಂಜಾತ ಮನುಸಾಲೆ ನೇಮಕ

ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿ 

ಭಾರತೀಯ ಸಂಜಾತ ಮನುಸಾಲೆ ನೇಮಕ

ಬೆಂಝ್ ಕಂಪನಿ ಭಾರತದಲ್ಲಿ ಸ್ಥಾಪಿಸಿರುವ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಆಡಳಿತ ನಿರ್ದೇಶಕ ಹಾಗೂ 

ಕಾರ್ಯನಿರ್ವಾಹಕ ಅಧಿಕಾರಿಯಾಗಿ ಇದೇ ಮೊದಲ ಬಾರಿಗೆ ಭಾರತೀಯರೊಬ್ಬರು, ಅದರಲ್ಲೂ ಕನ್ನಡಿಗರೊಬ್ಬರು 

ನೇಮಕಗೊಂಡಿದ್ದಾರೆ. ಮೂಲತಃ ಪುತ್ತೂರಿನವರೇ ಆದ ಮತ್ತು ಸಂಪೂರ್ಣ ಶಿಕ್ಷಣವನ್ನು ಕರ್ನಾಟಕದಲ್ಲೇ ಪಡೆದ

 ಮನುಸಾಲೆ ಅವರು ಏಪ್ರಿಲ್ 1 ರಿಂದ ಭಾರತದಲ್ಲಿರುವ ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ

 ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದೇ ಮೊದಲು:

ಬೆಂಝ್ ಸಂಸ್ಥೆ ಇತಿಹಾಸದಲ್ಲಿ ಭಾರತೀಯರೊಬ್ಬರು ಇಷ್ಟು ಉನ್ನತ ಹುದ್ದೆಗೆ ಏರುತ್ತಿರುವುದು ಇದೇ ಮೊದಲು. 

ಕನ್ನಡಿಗರೊಬ್ಬರು ಬೆಂಝ್ ಸಂಸ್ಥೆಯಲ್ಲಿ ಇಷ್ಟು ಉನ್ನತ ಹುದ್ದೆಗೇರಿದ ಉದಾಹರಣೆಯೇ ಇಲ್ಲ. 2010ರಿಂದ 

ಭಾರತದಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿದ್ದ ಡಾ. ಜೆನ್ಸ್ ಕಟ್ಟಾರಿಯಸ್ ಅವರು 

ಇದೇ ಸಂದರ್ಭದಲ್ಲಿ ಹೊಸ ಮುಖ್ಯಸ್ಥರಾದ ಮನು ಸಾಲೆ ಅವರಿಗೆ ಬೆಂಝ್ ಕಾರ್ ಕೀ ಹಸ್ತಾಂತರಿಸುವ ಮೂಲಕ 

ವಿದ್ಯುಕ್ತವಾಗಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

ಕಿರು ಪರಿಚಯ:

ಮನು ಸಾಲೆ ಅವರು 1973ರ ಮೇ 4ರಂದು ದಕ್ಷಿಣ ಕನ್ನಡ ತಾಲೂಕಿನ ಪುತ್ತೂರಿನಲ್ಲಿ ಜನಿಸಿದರು. 

ಹಾಸನ ಹಾಗೂ ಮೈಸೂರಿನಲ್ಲಿ ಅಧ್ಯಯನ ನಡೆಸಿದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ 

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. 1995ರಲ್ಲಿ ಕ್ಯಾಂಪಸ್ 

ಆಯ್ಕೆ ಪ್ರಕ್ರಿಯೆಯಲ್ಲಿ ಬಾಷ್ ಸಂಸ್ಥೆಗೆ ಆಯ್ಕೆಯಾದರು. ನಂತರ ಬ್ರಾಜಿಲ್, ಜರ್ಮನಿ, ಚೈನಾ, 

ದಕ್ಷಿಣ ಕೊರಿಯಾಗಳಲ್ಲಿ ಬಾಷ್ ಸಂಸ್ಥೆಯಲ್ಲೇ ಕೆಲಸ ಮಾಡಿದ ಅವರು, 2011ರ ಜೂನ್‌ನಲ್ಲಿ ಭಾರತದಲ್ಲಿರುವ 

ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಎಲಿಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ 

ಮುಖ್ಯಸ್ಥರಾಗಿ ಸೇರಿದರು. 2012ರಲ್ಲಿ ಉಪ ಆಡಳಿತ ನಿರ್ದೇಶಕರಾಗಿ ನೇಮಕಗೊಂಡಿದ್ದರು. 1996ರಲ್ಲಿ ಬೆಂಝ್ 

ಸಂಸ್ಥೆ ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ್ದು, ಈಗ ಅದರಲ್ಲಿ 1400 ಮಂದಿ ಉದ್ಯೋಗ 

ಪಡೆದಿದ್ದಾರೆ. ಬೆಂಝ್ ಸಂಸ್ಥೆ ಜರ್ಮನಿಯ ಹೊರಗೆ ಹೊಂದಿರುವ ಅತ್ಯಂತ ದೊಡ್ಡ ಮತ್ತು ಆಧುನಿಕ ಸಂಶೋಧನಾ

ಕೇಂದ್ರ ಇದಾಗಿದೆ.

Sunday, 6 July 2014ಬ್ರಿಟೀಷ್ ಕಾಲದ ಕೆಲವು ಮುಖ್ಯ ಘಟನೆಗಳು
ಸತಿ ಪದ್ದತಿಯ ನಿರ್ಮೂಲನೆ  ---- ವಿಲಿಯಂ ಬಂಟಿಕ್
ದತ್ತು ಮಕ್ಕಳಿಗೆ ಹಕ್ಕಿಲ್ಲ --------ಡಾಲ್ ಹೌಸಿ
ಭಾರತೀಯ ಶಾಸನಗಳ ಕೌನ್ಸಿಲ್ ಆಕ್ಟ್ ----ಲಾರ್ಡ್ ಕ್ಯಾನಿಂಗ್
ಇಲ್ಬಿರ್ಟ್ ಬಿಲ್----- ರಿಪ್ಪನ್
ಭಾರತೀಯ ಕೌನ್ಸಿಲ್ ಆಕ್ಟ್ ----ಲ್ಯಾನ್ಸ್ಡೌನ್
ಮಾರ್ಲೆ-ಮಿಂಟೋ ಸುಧಾರಣೆ------ ಮಿಂಟೋ
ರೌಲತ್ ಕಾಯ್ದೆ -------ಚೆಲ್ಮ್ಸ್ ಫೋರ್ಡ್
ಸೈಮನ್ ಕಮಿಷನ್ ------ಇರ್ವಿನ್
ಗಾಂಧಿ - ಇರ್ವಿನ್ ಮಾತುಕತೆ ------ಇರ್ವಿನ್
ಕಮ್ಯುನಲ್ ಅವಾರ್ಡ್------ ವಿಲ್ಲಿಂಗ್ಟನ್
ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ -----ವಿಲ್ಲಿಂಗ್ಟನ್
ಕ್ರಿಪ್ಸ್ ಕಾಯ್ದೆ------ ಲಿಂಗ್ನಿತ್ಗೋ
INA ವಿಚಾರಣೆ------- ವೇವೆಲ್
ವೇವೆಲ್ ಯೋಜನೆ ------ವೇವೆಲ್
ಕ್ಯಾಬಿನೆಟ್ ಮಿಷನ್ ಪ್ಲಾನ್------- ವೇವೆಲ್
ಭಾರತೀಯ ಸ್ವಾತಂತ್ರಕಾಯ್ದೆ----- ಮೌಂಟ್ ಬ್ಯಾಟನ್
ಎರಡನೇ ದುಂಡುಮೇಜಿನ ಸಭೆ --------ವಿಲ್ಲಿಂಗ್ಟನ್
ರೆಗ್ಯುಲೇಟಿಂಗ್ ಕಾಯ್ದೆ - 1773 -------ವಾರೆನ್ ಹೇಸ್ಟಿಂಗ್ಸ್ ( ಭಾರತದ ಮೊದಲ ಗೌರ್ನರ್ ಜನರಲ್)
ಜಮೀನ್ದಾರಿ ಕಾಯ್ದೆ --------ಕಾರ್ನ್ ವಾಲಿಸ್
ಸಹಾಯಕ ಸೈನ್ಯ ಪದ್ದತಿ----------- ವೆಲ್ಲೆಸ್ಲಿ